ನಿನ್ನೆ ಚಿಕ್ಕಬಳ್ಳಾಪುರ ಬಳಿಯ ಬಾವಿಯೊಂದರಲ್ಲಿ ಪತ್ತೆಯಾಗಿದ್ದ ಬೈಕ್ 8 ತಿಂಗಳು ಹಿಂದೆ ಕಳುವಾಗಿತ್ತು
ಕಿರಣ್ ಕುಮಾರ್ ರೆಡ್ಡಿ ಬೈಕ್ ಕಳುವಾದ ಮರುದಿನವೇ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ಹೇಳುತ್ತಾನೆ ಆದರೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳುವ ಪ್ರಕಾರ ಅವನು ದೂರು ದಾಖಲಿಸಿಲ್ಲ. ಇನ್ಶೂರನ್ಸ್ ಲ್ಯಾಪ್ಸ್ ಆಗಿದ್ದು ನಿಜವಾದರೂ ದೂರು ಸಲ್ಲಿಸಿದ್ದೆ ಮತ್ತು ಪೊಲೀಸರು ಪತ್ತೆ ಮಾಡೋದಾಗಿ ಹೇಳಿದ್ದರು ಅಂತ ರೆಡ್ಡಿ ಹೇಳುತ್ತಾನೆ.
ಚಿಕ್ಕಬಳ್ಳಾಪುರ: ನಿನ್ನೆ ನಗರಕ್ಕೆ ಹತ್ತಿರದ ಹರಿಹರಪುರ ಗೇಟ್ ನಿಂದ ಕೊಂಚ ದೂರ ರಸ್ತೆಬದಿಯ ಬಾವಿಯೊಂದರಲ್ಲಿ ಬುಲೆಟ್ ಬೈಕ್ ಪತ್ತೆಯಾಗಿದ್ದನ್ನು ಮತ್ತು ಅದನ್ನು ಹರಸಾಹಸ ಪಟ್ಟು ಮೇಲೆ ಎಳೆದಿದ್ದನ್ನು ನಾವು ವರದಿ ಮಾಡಿದ್ದೇವೆ. ಇವತ್ತು ಅದರ ಮಾಲೀಕ ಪತ್ತೆಯಾಗಿದ್ದಾನೆ. ಈತನ ಹೆಸರು ಕಿರಣ್ ಕುಮಾರ್ ರೆಡ್ಡಿ, ಜಿಲ್ಲೆಯ ಮುಷ್ಟೂರು ಗ್ರಾಮದ ನಿವಾಸಿ. ರೆಡ್ಡಿ ಹೇಳುವ ಪ್ರಕಾರ ಕಳೆದ ವರ್ಷ ಮೇ 10 ರಂದು ಬೈಕ್ ಕಳ್ಳತನವಾಗಿತ್ತು ಮತ್ತು ಮರುದಿನ ಬೆಳಗ್ಗೆ ವಿಷಯ ಆತನ ಗಮನಕ್ಕೆ ಬಂದಿತ್ತು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬೈಕ್ ಚಾಸಿಸ್ ನಂಬರ್ ಆಧರಿಸಿ ಅದು ಕಿರಣ್ ಗೆ ಸೇರಿದ್ದು ಅನ್ನೋದನ್ನು ಪತ್ತೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾವಿಯಲ್ಲಿ ಅನುಮಾನಾಸ್ಪದ ಬುಲೆಟ್ ಬೈಕ್ ಪತ್ತೆ: ಭಯದಲ್ಲೇ ಮೇಲೆತ್ತಿದ ಜನರು