ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಸಧ್ಯದಲ್ಲೇ ಮುಕ್ತಿ; ಡಬಲ್ ಡೆಕ್ಕರ್ ಫ್ಲೈಓವರ್ ಇನ್ನೊಂದು ಭಾಗ ಶೀಘ್ರದಲ್ಲೇ ಓಪನ್

Updated on: Dec 06, 2025 | 11:33 AM

ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ಒತ್ತಡ ತಗ್ಗಿಸಲು ಬಿಎಂಆರ್ಸಿಲ್ ದೊಡ್ಡ ಹೆಜ್ಜೆ ಇಟ್ಟಿದೆ. ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್‌ನ ಮತ್ತೊಂದು ಭಾಗವನ್ನು ಡಿಸೆಂಬರ್–ಜನವರಿಯಲ್ಲಿ ಓಪನ್ ಮಾಡಲಾಗುತ್ತಿದ್ದು, ಆರ್.ವಿ. ರೋಡ್–ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಡಿ ನಿರ್ಮಿಸಲಾದ ಈ ರಸ್ತೆ ಕೆಳಮಟ್ಟದಲ್ಲಿ ವಾಹನಗಳು ಮತ್ತು ಮೇಲ್ಭಾಗದಲ್ಲಿ ಮೆಟ್ರೋ ಸಂಚಾರಕ್ಕೆ ಅನುಕೂಲವಾಗಲಿದೆ. 3.36 ಕಿಮೀ ಉದ್ದದ, 449 ಕೋಟಿ ರೂ. ವೆಚ್ಚದ ಈ ಯೋಜನೆ, ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಮೀ ವಿಸ್ತೀರ್ಣ ಹೊಂದಿರಲಿದೆ. ಹೊಸ ಭಾಗ ತೆರೆದರೆ ಸಿಲ್ಕ್ ಬೋರ್ಡ್–ರಾಗಿಗುಡ್ಡ ಮಾರ್ಗದ ಟ್ರಾಫಿಕ್ ಮುಕ್ತಗೊಳಿಸುವಲ್ಲಿ ಇದು ಸಹಾಯವಾಗಲಿದೆ.

ಬೆಂಗಳೂರು, ಡಿಸೆಂಬರ್ 06: ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ಒತ್ತಡ ತಗ್ಗಿಸಲು ಬಿಎಂಆರ್ಸಿಲ್ ದೊಡ್ಡ ಹೆಜ್ಜೆ ಇಟ್ಟಿದೆ. ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್‌ನ ಮತ್ತೊಂದು ಭಾಗವನ್ನು ಡಿಸೆಂಬರ್–ಜನವರಿಯಲ್ಲಿ ಓಪನ್ ಮಾಡಲಾಗುತ್ತಿದ್ದು, ಆರ್.ವಿ. ರೋಡ್–ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಡಿ ನಿರ್ಮಿಸಲಾದ ಈ ರಸ್ತೆಯ ಕೆಳ ಭಾಗದಲ್ಲಿ ವಾಹನಗಳು ಮತ್ತು ಮೇಲ್ಭಾಗದಲ್ಲಿ ಮೆಟ್ರೋ ಸಂಚಾರ ಸಾಧ್ಯವಾಗಲಿದೆ. 3 .36 ಕಿಮೀ ಉದ್ದದ, 449 ಕೋಟಿ ರೂ. ವೆಚ್ಚದ ಈ ಯೋಜನೆ, ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಮೀ ವಿಸ್ತೀರ್ಣ ಹೊಂದಿರಲಿದೆ. ಹೊಸ ಭಾಗ ತೆರೆದರೆ ಸಿಲ್ಕ್ ಬೋರ್ಡ್–ರಾಗಿಗುಡ್ಡ ಮಾರ್ಗದ ಟ್ರಾಫಿಕ್ ಮುಕ್ತಗೊಳಿಸುವಲ್ಲಿ ಇದು ಸಹಾಯವಾಗಲಿದೆ.

ಇದನ್ನೂ ಓದಿ ನಿಗದಿತ ಅವಧಿಯೊಳಗೆ ಮೆಟ್ರೋ ನೀಲಿ ಮಾರ್ಗ ಕಾಮಗಾರಿ ಮುಗಿಯಬೇಕು, ಇಲ್ಲವಾದ್ರೆ ಮುಂದೆ ಕಾಮಗಾರಿ ನೀಡಲ್ಲ: ಗುತ್ತಿಗೆದಾರರಿಗೆ ಡಿಸಿಎಂ ಎಚ್ಚರಿಕೆ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More