AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶನಿ ಕಾಟ ನಿವಾರಣೆಗೆ ಅತ್ಯಂತ ಸರಳ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ

ಶನಿ ಕಾಟ ನಿವಾರಣೆಗೆ ಅತ್ಯಂತ ಸರಳ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ

ಪ್ರಸನ್ನ ಹೆಗಡೆ
|

Updated on: Apr 30, 2026 | 6:40 AM

Share

ಶನಿ ಗ್ರಹದ ಅಶುಭ ಪ್ರಭಾವಗಳಿಂದ ಮುಕ್ತಿ ಪಡೆಯಲು ಜ್ಯೋತಿಷ್ಯದಲ್ಲಿ ಅನೇಕ ವಿಧಾನಗಳಿವೆ. ಆದರೆ ಡಾ. ಬಸವರಾಜ ಗುರೂಜಿ ಸರಳವಾದ, ಯಾವುದೇ ಖರ್ಚಿಲ್ಲದ ಒಂದು ತಂತ್ರವನ್ನು ವಿವರಿಸಿದ್ದಾರೆ. ಪ್ರತಿದಿನ ಮುಂಜಾನೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಇಲ್ಲದೆ, ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ 30 ನಿಮಿಷ ನಡೆಯುವುದರಿಂದ ಶನಿಯ ಕಾಟ ಕಡಿಮೆಯಾಗಿ ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ ಮತ್ತು ಕೌಟುಂಬಿಕ ಶಾಂತಿ ಲಭಿಸುತ್ತದೆ. ಇದರಿಂದ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಲಾಭ ಸಿಗಲಿದೆ.

ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಕರ್ಮ ಫಲದಾತ ಎಂದು ಪರಿಗಣಿಸಲಾಗುತ್ತದೆ. ಸಾಡೆ ಸಾತಿ, ಅರ್ಧಾಷ್ಟಮ ಶನಿ, ಪಂಚಮ ಶನಿ, ಅಷ್ಟಮ ಶನಿ ಮುಂತಾದ ಅವಧಿಗಳಲ್ಲಿ ಶನಿ ಪ್ರಭಾವ ಹೆಚ್ಚಾಗಿ, ಕಷ್ಟಗಳು ಎದುರಾಗಬಹುದು. ಈ ಸಮಸ್ಯೆಗಳಿಂದ ಹೊರಬರಲು ಸಾಮಾನ್ಯವಾಗಿ ಎಳ್ಳು ದಾನ, ಎಳ್ಳೆಣ್ಣೆ ದೀಪ, ಕಪ್ಪು ವಸ್ತ್ರಗಳಂತಹ ಪರಿಹಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಡಾ. ಬಸವರಾಜ ಗುರೂಜಿ ಯಾವುದೇ ಖರ್ಚಿಲ್ಲದೆ, ಅತ್ಯಂತ ಸರಳವಾದ ಮತ್ತು ಪರಿಣಾಮಕಾರಿ ವಿಧಾನವನ್ನು ವಿವರಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಹಾಕದೆ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸುಮಾರು ಅರ್ಧ ಘಂಟೆ ಕಾಲ ನಡೆಯುವ ಅಭ್ಯಾಸವು ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಇದರಿಂದ ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ, ಅಪವಾದಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಜಯ, ರಾಜಕೀಯ ಪ್ರಗತಿ ಹಾಗೂ ಕುಟುಂಬದಲ್ಲಿ ಸಾಮರಸ್ಯ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us