‘ಬೇರೆಯವರು ಆರ್​ಸಿಬಿ ತಂಡವನ್ನು ಪ್ರೀತಿಸ್ತಾರೆ, ನಾನು ಉಸಿರಾಡ್ತೀನಿ’: ಸಿಂಪಲ್​ ಸುನಿ

Updated on: Feb 08, 2024 | 2:09 PM

ವಿನಯ್​ ರಾಜ್​ಕುಮಾರ್​ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗೆ ಸಿಂಪಲ್​ ಸುನಿ ನಿರ್ದೇಶನ ಮಾಡಿದ್ದಾರೆ. ಸುನಿ ಅವರಿಗೆ ಸಿನಿಮಾದ ರೀತಿಯೇ ಕ್ರಿಕೆಟ್​ ಮೇಲೂ ಪ್ರೀತಿ ಇದೆ. ಆರ್​ಸಿಬಿ ತಂಡದ ದೊಡ್ಡ ಅಭಿಮಾನಿ ಅವರು. ಆದರೂ ತಂಡದ ಮ್ಯಾನೇಜ್​ಮೆಂಟ್​ ಬಗ್ಗೆ ತಮಗೆ ಕೋಪ ಇದೆ ಎಂದು ಅವರು ಹೇಳಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ನಿರ್ದೇಶಕ ಸಿಂಪಲ್​ ಸುನಿ (Simple Suni) ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಒಂದು ಸರಳ ಪ್ರೇಮಕಥೆ’ (Ondu Sarala Premakathe) ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಅನೇಕ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಚಿತ್ರತಂಡದವರ ಜೊತೆ ವೇದಿಕೆ ಏರಿದ ಸುನಿ ಅವರಿಗೆ ‘ಆರ್​ಸಿಬಿ’ (RCB) ಬಗ್ಗೆ ಪ್ರಶ್ನೆ ಎದುರಾಯಿತು. ‘ಆರ್​ಸಿಬಿ ಮೂರು ವರ್ಷ ಸೋಲುತ್ತೆ ಅಂತ ಹೇಳಿದ್ದೇರಿ. ಅದೇನು ಗಿಮಿಕ್​ ಇರಬಹುದಾ’ ಎಂದು ನಿರೂಪಕಿ ಕೇಳಿದ್ದಕ್ಕೆ ಸುನಿ ಉತ್ತರ ನೀಡಿದ್ದಾರೆ. ಆಟಗಾರರ ಸೆಲೆಕ್ಷನ್​ ಬಗ್ಗೆ ಸುನಿಗೆ ಬೇಸರ ಇದೆ. ‘ಟೀಮ್​ ಬಂದಾಗಲೇ ಎಲ್ಲರೂ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಬೇಕಾದ ಪ್ಲೇಯರ್ಸ್​ ಇಲ್ಲ. ಅದಕ್ಕಾಗಿ ಮ್ಯಾನೇಜ್​ಮೆಂಟ್​ ಮೇಲೆ ನಮಗೆ ಕೋಪ. ಆರ್​ಸಿಬಿಯನ್ನು ಬೇರೆಯವರು ಪ್ರೀತಿಸಬಹುದು. ಆದರೆ ನಾನು ಅದನ್ನೇ ಉಸಿರಾಡುತ್ತೇನೆ. ಈ ಸಲ ಕಪ್​ ನಮ್ದೇ ಅಂತ 10 ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದನ್ನು ಯಾರೂ ಕೇಳ್ತಿಲ್ಲ’ ಎಂದು ಸುನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More