ನಾನೊಬ್ಬ ಸಂಸ್ಕಾರವಂತ ಹಾಗಾಗಿ ನಾರಾಯಣಸ್ವಾಮಿ ಚಲವಾದಿಯವರನ್ನು ನಾಯಿ ಅನ್ನಲ್ಲ: ಪ್ರದೀಪ್ ಈಶ್ವರ್
ನಾರಾಯಣಸ್ವಾಮಿಯವರು ಪ್ರಿಯಾಂಕ್ ಖರ್ಗೆ ಅವರಿಗೆ ನಾಯಿ ಅಂತ ಪದ ಬಳಸಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಪ್ರದೀಪ್ ಈಶ್ವರ್ ಹೇಳಿದರು. ಸಚಿವ ಡಾ ಎಂಸಿ ಸುಧಾಕರ್ ಅವರು ತನ್ನ ರಾಜಕೀಯ ಗುರು, ಪ್ರತಿವಿಷಯದಲ್ಲಿ ಅವರು ತನಗೆ ಮಾರ್ಗದರ್ಶನ ನೀಡುತ್ತಾರೆ, ಒಬ್ಬ ಗುರು ತನ್ನ ಶಿಷ್ಯನಿಗೆ ಸಲಹೆ ಮಾರ್ಗದರ್ಶನ ನೀಡೋದು ತಪ್ಪಾ ಎಂದು ಶಾಸಕ ಪ್ರಶ್ನಿಸಿದರು.
ಬೆಂಗಳೂರು, ಮೇ 24: ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ನಾರಾಯಣಸ್ವಾಮಿ ಚಲವಾದಿ (Narayana Swamy Chalavadi) ಸಚಿವ ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಮಾತಾಡುವಾಗ ಬಳಸಿದ ನಾಯಿ ಪದ ಭಾರೀ ಚರ್ಚೆಗೀಡಾಗುತ್ತಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ತಾನು ಪ್ರಿಯಾಂಕ್ ಖರ್ಗೆ ಜೊತೆ ನಿಂತಿರುವುದಾಗಿ ಹೇಳಿದರು. ತಮ್ಮ ನಾಯಕರ ಬಗ್ಗೆ ಮಾತಾಡುವಾಗ ನಾಯಿ ಅಂತ ಪದ ಬಳಸಿದರೆ ನೋವಾಗುತ್ತದೆ, ಅಸಲಿಗೆ ನಾರಾಯಣಸ್ವಾಮಿ ಹೇಳಿದ ಆನೆ-ನಾಯಿ ಕತೆಯಲ್ಲಿ ಖರ್ಗೆಯವರು ಆನೆ, ಆದರೆ ನಾರಾಯಣಸ್ವಾಮಿಯವರನ್ನು ತಾನು ನಾಯಿ ಅಂತ ಅನ್ನಲ್ಲ, ಯಾಕೆಂದರೆ ತಾನೊಬ್ಬ ಸಂಸ್ಕಾರವಂತ ಎಂದು ಈಶ್ವರ್ ಹೇಳಿದರು.
ಇದನ್ನೂ ಓದಿ: ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಇ ಖಾತಾಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ