AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

Jagadisha B
| Edited By: |

Updated on: Apr 08, 2026 | 2:55 PM

Share

ನಿವೇಶನ ಮಂಜೂರಾಗಿದ್ದರೂ ಸಹ ಹಕ್ಕುಪತ್ರ ನೀಡದ್ದಕ್ಕೆ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವರ ಜನ ಸ್ಪಂದನಾ ಕಾರ್ಯಕ್ರಮದ ವೇದಿಕೆ ಮೇಲೆ ದಯಾಮರಣ ಕೋರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಹಕ್ಕುಪತ್ರ ನೀಡದ್ದಕ್ಕೆ ವೇದಿಕೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿರಾದ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಸಚಿವರು, ಡಿಸಿಗೆ , ಡಿಸಿ ಕಮಿಷನರ್ ಕಡೆಗೆ ಕಳುಹಿಸುತ್ತಾರೆ. ಹೀಗೆ 15 ದಿನಕ್ಕೊಮ್ಮೆ ಅಲೆದಾಡುತ್ತಿದ್ದೇನೆ. ಜನಸಂಪರ್ಕ ಸಭೆಯಲ್ಲಿ ಸ್ಪಂದನೆಯಿಲ್ಲ. ಹಕ್ಕುಪತ್ರಕ್ಕೆ 25 ಸಾವಿರ ರೂ ಕೇಳುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.

ತುಮಕೂರು, (ಏಪ್ರಿಲ್ 08): ನಿವೇಶನ ಮಂಜೂರಾಗಿದ್ದರೂ ಸಹ ಹಕ್ಕುಪತ್ರ ನೀಡದ್ದಕ್ಕೆ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವರ ಜನ ಸ್ಪಂದನಾ ಕಾರ್ಯಕ್ರಮದ ವೇದಿಕೆ ಮೇಲೆ ದಯಾಮರಣ ಕೋರಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಹಕ್ಕುಪತ್ರ ನೀಡದ್ದಕ್ಕೆ ವೇದಿಕೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿರಾದ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಸಚಿವರು, ಡಿಸಿಗೆ , ಡಿಸಿ ಕಮಿಷನರ್ ಕಡೆಗೆ ಕಳುಹಿಸುತ್ತಾರೆ. ಹೀಗೆ 15 ದಿನಕ್ಕೊಮ್ಮೆ ಅಲೆದಾಡುತ್ತಿದ್ದೇನೆ. ಜನಸಂಪರ್ಕ ಸಭೆಯಲ್ಲಿ ಸ್ಪಂದನೆಯಿಲ್ಲ. ಹಕ್ಕುಪತ್ರಕ್ಕೆ 25 ಸಾವಿರ ರೂ ಕೇಳುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.

ಇನ್ನು ಇದೇ ವೇಳೆ ಮಹಿಳೆ ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾಳೆ. ಬಾರಯ್ಯ ಸಿದ್ದಯ್ಯ, ಬಾರಯ್ಯ ರಾಮಯ್ಯ ನಮ್ಮ ಮನವಿ ಆಲಿಸಯ್ಯಾ. ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ ಎಂದು ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ 2024ರಲ್ಲಿ ಸಿಎಂ ಸಿದ್ದರಾಮಯ್ಯನವರು ತುಮಕೂರಿಗೆ ಬಂದಿದ್ದ ವೆಳೆ ಇದೇ ಮಹಿಳೆಗೆ 20/30ಜಾಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ ಈವರೆಗೂ ಆ ಜಾಗ ಹೇಳಿಲ್ಲ. ಹಕ್ಕು ಪತ್ರ ನೀಡಿಲ್ಲ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us