ಮಹಜರುಗಾಗಿ ಚಿನ್ನಯ್ಯನನ್ನು ಮಹೇಶ್ ತಿಮರೋಡಿ ಮನೆಗೆ ಕರೆತಂದ ಎಸ್ಐಟಿ ಅಧಿಕಾರಿಗಳು

Updated on: Aug 26, 2025 | 12:11 PM

ಉಡುಪಿಯ ನಮ್ಮ ವರದಿಗಾರ ಹೇಳುವ ಪ್ರಕಾರ ಮಾಧ್ಯಮದವರನ್ನಾಗಲೀ ಅಥವಾ ಸಾರ್ವಜನಿಕರನ್ನಾಗಲೀ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆ ಹತ್ತಿರಕ್ಕೆ ಬಿಡುತ್ತಿಲ್ಲ, ಸುಮಾರು ಒಂದು ಕಿಮೀ ದೂರ ಅವರನ್ನು ತಡೆಯಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಅಧಿಕಾರಿಗಳಿಗೆ ಸಾಕಷ್ಟು ವಿವರಗಳನ್ನು ನೀಡಿದ್ದಾನೆ ಎಂಬ ಮಾಹಿತಿ ಇದೆ. ಆದರೆ ತನಿಖೆ ಪೂರ್ಣಗೊಳ್ಳದ ಹೊರತು ಯಾವ ಮಾಹಿತಿಯನ್ನೂ ಅಧಿಕಾರಿಗಳು ಬಹಿರಂಗಗೊಳಿಸಲ್ಲ.

ದಕ್ಷಿಣ ಕನ್ನಡ, ಆಗಸ್ಟ್ 26: ಸಿಎನ್ ಚಿನ್ನಯ್ಯನನ್ನು 10-ದಿನ ಅವಧಿಗೆ ಕಸ್ಟಡಿ ಪಡೆದಿರುವ ವಿಶೇಷ ತನಿಖಾ ತಂಡವು (SIT) ಇಂದು ಬೆಳಗ್ಗೆ ಅವನನ್ನು ಮಹೇಶ್ ತಿಮರೋಡಿಯವರ ಮನೆಗೆ ಸ್ಥಳ ಮಹಜರು ನಡೆಸಲು ಕರೆತಂದಿದೆ. ತಿಮರೋಡಿಯವರ ಮನೆ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿದೆ. ಚಿನ್ನಯ್ಯನನ್ನು ಇಲ್ಲಿಗೆ ಕರೆತರುವ ಮುನ್ನ ಎಸ್ಐಟಿ ತಂಡವು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡಿದೆ. ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಎಸ್​ಐಟಿ ತಂಡಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಚಿನ್ನಯ್ಯ ಕೆಲದಿನಗಳ ಕಾಲ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ. ತನ್ನ ಬಳಿ ಮೊಬೈಲ್ ಫೋನ್ ಇಲ್ಲವೆಂದು ಚಿನ್ನಯ್ಯ ಹೇಳುತ್ತಿರುವನಾದರೂ ಅವನು ತನ್ನ ಫೋನನ್ನು ತಿಮರೋಡಿಯವರ ಮನೆಯಲ್ಲಿ ಅಡಗಿಸಿರುವ ಸಾಧ್ಯತೆ ಇದೆಯೆಂದು ಎಸ್ಐಟಿ ಭಾವಿಸುತ್ತದೆ.

ಇದನ್ನೂ ಓದಿ:  ತಿಮರೋಡಿನ ಒದ್ದು ಒಳಗೆ ಹಾಕಿಸಿದ್ದೇವೆ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ