ಮುಡಾದಿಂದ 50:50 ನಿಯಮದಡಿ ಅಕ್ರಮವಾಗಿ ಪಡೆದಿರುವವರ ನಿವೇಶನ ರದ್ದು ಮಾಡಲು ಹೇಳುತ್ತೇನೆ: ಜಿಟಿ ದೇವೇಗೌಡ

|

Updated on: Nov 07, 2024 | 1:17 PM

ಮುಡಾ ಅಧ್ಯಕ್ಷರಾಗಿದ್ದ ಕೆ ಮರಿಗೌಡ ರಾಜೀನಾಮೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಯವರು ಅಧ್ಯಕ್ಷತೆ ವಹಿಸಿಕೊಂಡು ಕರೆಯುತ್ತಿರುವ ಮೊದಲ ಸಭೆ ಇದಾಗಿದೆ, ಸಭೆಗೆ ನಿರ್ದಿಷ್ಟವಾದ ಅಜೆಂಡಾ ಇಲ್ಲ, ಕಳೆದ ಬಾರಿ ಸಭೆಯ ನಡಾವಳಿಗಳಿಗೆ ಆಯುಕ್ತರು ಸಹಿ ಮಾಡದ ಕಾರಣ, ಆ ಸಭೆಯ ವಿಷಯಗಳನ್ನೇ ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ ಅಂತ ದೇವೇಗೌಡ ತಿಳಿಸಿದರು.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸುವ ಮೊದಲು ಮಾಧ್ಯಮದವರೊಡನೆ ಮಾತಾಡಿದ ಮುಡಾ ಸದಸ್ಯ ಜಿಟಿ ದೇವೇಗೌಡ, ಕಳೆದ ಒಂದು ವರ್ಷದಿಂದ ಮುಡಾ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿದೆ, ಇದು ಎಲ್ಲರೂ ತಲೆ ತಗ್ಗಿಸುವ ವಿಚಾರ, ಮುಡಾದಲ್ಲಿ ಜಾರಿಯಲ್ಲಿರುವ 50:50 ನಿವೇಶನ ಹಂಚಿಕೆ ನಿಯಮವನ್ನು ರದ್ದು ಮಾಡಿ ಅಂತ ತಾನು ಸಭೆಯಲ್ಲಿ ಹೇಳಲ್ಲ, ಅದರೆ ಆ ನಿಯಮದಡಿ ಅಕ್ರಮವಾಗಿ ಪಡೆದಿರುವ ನಿವೇಶನಗಳ ನೋಂದಣಿಯನ್ನು ರದ್ದು ಮಾಡುವಂತೆ ಹೇಳುವುದಾಗಿ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್​ಡಿ ಕುಮಾರಸ್ವಾಮಿ