ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಶಿವಕಾರ್ತಿಕೇಯನ್ ಸಾಂತ್ವನ
‘ಪುನೀತ್ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ, ಫ್ಯಾನ್ಸ್‌ಗೆ ಎಷ್ಟು ಕಷ್ಟ ಆಗುತ್ತಿದೆ ಎಂದು ನನಗೆ ಅರ್ಥ ಆಗತ್ತೆ. ಇನ್ನೂ ಆ ಶಾಕ್‌ನಿಂದ ಆಚೆ ಬರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದರು ಶಿವಕಾರ್ತಿಕೇಯನ್.
ಅಕ್ಟೋಬರ್ 29ರಂದು ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ್ದರು. ಅವರು ಮೃತಪಟ್ಟಿದ್ದಾರೆ ಎಂಬುದನ್ನು ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈಗ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಲು ತಮಿಳು ನಟ ಶಿವಕಾರ್ತಿಕೇಯನ್ ಆಗಮಿಸಿದ್ದಾರೆ. ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಶಿವಕಾರ್ತಿಕೇಯನ್ ಅವರು ಪುನೀತ್ ಮನೆಗೆ ಭೇಟಿ ನೀಡಿದರು. ಬಳಿಕ ಅಪ್ಪು ಸಮಾಧಿ ಬಳಿಗೂ ತೆರಳಿದರು. ಈ ಮಧ್ಯೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವಕಾರ್ತಿಕೇಯನ್, ‘ಬೆಂಗಳೂರಿಗೆ ಬಂದಾಗ ಅಪ್ಪು ಅಣ್ಣ ಮನೆಗೆ ಬಾ ಅಂತಿದ್ರು. ಬಂದಿದ್ದೇನೆ, ಆದ್ರೆ ಈಗ ಅವರೇ ಇಲ್ಲ’ ಎಂದು ಭಾವುಕರಾದರು.
‘ಪುನೀತ್ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ, ಫ್ಯಾನ್ಸ್‌ಗೆ ಎಷ್ಟು ಕಷ್ಟ ಆಗುತ್ತಿದೆ ಎಂದು ನನಗೆ ಅರ್ಥ ಆಗತ್ತೆ. ಇನ್ನೂ ಆ ಶಾಕ್‌ನಿಂದ ಆಚೆ ಬರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದರು ಶಿವಕಾರ್ತಿಕೇಯನ್.
ಇದನ್ನೂ ಓದಿ: ಪತ್ನಿ ಅಶ್ವಿನಿಗೆ ಪ್ರೀತಿಯಿಂದ 4 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದ ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ