SM Krishna No More: ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಹಿರಿಯ ಮುತ್ಸದ್ದಿ ಮೊಮ್ಮಗ ಅಮರ್ತ್ಯ ಹೆಗಡೆ
SM Krishna No More: ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿ ನಡೆಯುತ್ತಿರುವ ವಿಧಿವಿಧಾನಗಳ ಬಗ್ಗೆ ವಿವರಣೆ ನೀಡುತ್ತಾ ಎಸ್ ಎಂ ಕೃಷ್ಣ ರಾಜಕೀಯ ಬದುಕಿನ ಸಾಧನೆಗಳನ್ನು ಹೇಳುತ್ತಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಿದಂತೆ, ಕೃಷ್ಣ ಅವರು ನಾಲ್ಕೂ ಸದನಗಳ ಸದಸ್ಯರಾಗಿ ಜನಸೇವೆ ಮಾಡಿದವರು, ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸಿ ಇಡೀ ಜಗತ್ತೇ ಅದರತ್ತ ಬೆರಗುಗಣ್ಣಿಂದ ನೋಡುವಂತೆ ಮಾಡಿದವರು.
ಮಂಡ್ಯ: ನಿನ್ನೆ ಇಹಲೋಕದ ಯಾತ್ರೆಯನ್ನು ಮುಗಿಸಿದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತಿಮ ವಿಧಾನಗಳನ್ನು ಅವರ ಮೊಮ್ಮಗ ಮತ್ತು ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗಡೆ ಪೂರೈಸಿದರು. ಪಂಚೆ ಸುತ್ತಿಕೊಂಡು ಮತ್ತು ಮೈಮೇಲೆ ಪಂಚೆಯೊಂದನ್ನು ಹೊದ್ದು ಅವರು ಅರ್ಚಕರು ನೀಡುವ ಸೂಚನೆಗಳನ್ನು ಪಾಲಿಸುವುದು ದೃಶ್ಯಗಳಲ್ಲಿ ಕಾಣಿಸುತ್ತದೆ. ಅರ್ಚಕರೊಬ್ಬರು ಹೆಗಡೆ ಮೈಮೇಲೆ ಹೊದ್ದಿದ್ದ ಪಂಚೆಯನ್ನು ಸರಿಯಾಗಿ ಕಟ್ಟಿದರು. ಅಮರ್ತ್ಯ ತಮ್ಮ ಸಹೋದರ ಹಾಗೂ ಕೆಲ ಅರ್ಚಕರೊಂದಿಗೆ ಮಂತ್ರಗಳನ್ನು ಹೇಳುತ್ತಾ ಕೃಷ್ಣ ಅವರ ಪಾರ್ಥೀವ ಶರೀರರದ ಪ್ರದಕ್ಷಿಣೆ ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SM Krishna No More: ಮಾಜಿ ಮುಖ್ಯಮಂತ್ರಿಯ ಅಂತ್ಯ ಸಂಸ್ಕಾರಕ್ಕೆ ಬಳಕೆಯಾಗಲಿದೆ ಒಂದು ಟನ್ ಗಂಧದ ಕಟ್ಟಿಗೆ
Published on: Dec 11, 2024 05:18 PM
Latest Videos