Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್

ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 11, 2024 | 5:59 PM

ಎಸ್​ಎಂ ಕೃಷ್ಣ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಳಗಾವಿಯಿಂದ ಓಡೋಡಿ ಬಂದಿದ್ದು, ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ಎಲ್ಲಾ ಜವಾಬ್ದಾರಿ ಹೊತ್ತು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಂತಿಮವಾಗಿ ತನ್ನ ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದರು.

ಮಂಡ್ಯ, (ಡಿಸೆಂಬರ್ 11):  ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ವಿದೇಶಾಂಗ ಸಚಿವ, ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸೋಮನಹಳ್ಳಿಯಲ್ಲಿ ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತಿಮ ವಿಧಿವಿಧಾನದ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ ಅವರು ತಮ್ಮ ಅಜ್ಜನ(ಎಸ್​ಎಂ ಕೃಷ್ಣ) ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮೊದಲು ಶವಪೆಟ್ಟಿಗೆಯಿಂದ ಎಸ್​​ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಹೂವಿನಿಂದ ನಿರ್ಮಿಸಲಾಗಿದ್ದ ಕುರ್ಜ್​ಗೆ(ಚಟ್ಟ) ಶಿಫ್ಟ್ ಮಾಡಲಾಗಿದ್ದು, ಬಳಿಕ ತಮ್ಮ ಗುರು ಮಲಗಿದ್ದ ಕುರ್ಜ್ ಅನ್ನು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ​ ಹೊತ್ತುಕೊಂಡು ಹೆಜ್ಜೆ ಹಾಕಿದರು. ಈ ಮೂಲಕ ಡಿಕೆ ಶಿವಕುಮಾರ್- ಡಿಕೆ ಸುರೇಶ್ ತಮ್ಮ ರಾಜಕೀಯ ಗುರುವಿಗೆ ಅಂತಿಮ ವಿದಾಯ ಹೇಳಿದರು.​

ಎಸ್.ಎಂ ಕೃಷ್ಣ ಅವ್ರ ಪಾಲಿಗೆ ಡಿಕೆ ಶಿವಕುಮಾರ್ ಬರೀ ಬೀಗರಲ್ಲ. ಮನೆಮಗನಂತೆ ಕುಟುಂಬದ ಜೊತೆ ನಿಂತವರು. ಕೃಷ್ಣ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರೂ ಗುರುವಿನ ಮೇಲಿನ ಡಿಕೆ ನಿಯತ್ತು ಮಾತ್ರ ಅಚಲವಾಗಿಯೇ ಇತ್ತು.

ಇದನ್ನೂ ಓದಿ: ಎಸ್​ಎಂ ಕೃಷ್ಣ ಚಿತೆಗೆ ಮೊಮ್ಮಗ ಅಗ್ನಿಸ್ಪರ್ಶ: ರಾಜಕೀಯ ಮುತ್ಸದಿ ಪಂಚಭೂತಗಳಲ್ಲಿ ಲೀನ