ತಪ್ಪದ ಕಮರ್ಷಿಯಲ್ ಟ್ಯಾಕ್ಸ್ ಬವಣೆ, ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದ ಸಣ್ಣ ವರ್ತಕರು
ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ನೋಟೀಸ್ ಕಳಿಸುತ್ತಿರೋದು ಕೇವಲ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದೆಯಾ ಅಥವಾ ಬೇರೆ ರಾಜ್ಯಗಳಲ್ಲೂ ಇದು ಜಾರಿಯಲ್ಲಿದೆಯಾ ಅನ್ನೋದು ಗೊತ್ತಾಗುತ್ತಿಲ್ಲ. ಇದು ದೇಶದಾದ್ಯತ ನಡೆಯುತ್ತಿದ್ದರೆ ಮತ್ತು ವ್ಯಾಪಾರಿಗಳೆಲ್ಲ ಪ್ರತಿಭಟನೆಗೆ ಮುಂದಾದರೆ ರಾಜ್ಯ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.
ಬೆಂಗಳೂರು, ಜುಲೈ 15: ಸಣ್ಣಪುಟ್ಟ ವರ್ತಕರು, ಬೇಕರಿ, ಟೀ ಸ್ಟಾಲ್, ಹಣ್ಣು-ತರಕಾರಿ ಅಂಗಡಿಗಳನ್ನಿಟ್ಟುಕೊಂಡು ಉಪ ಜೀವನ ನಡೆಸುತ್ತಿರುವವರು ಸರ್ಕಾರಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. ಇವರು ಮಾಡುವ ವ್ಯಾಪಾರದ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯು ಲಕ್ಷಗಟ್ಟಲೆ ತೆರಿಗೆ ಹೇರುತ್ತಿರುವ ಸಂಗತಿಯನ್ನು ನಾವು ವರದಿ ಮಾಡಿದ್ದೇವೆ. ಕೆಲವರಿಗೆ 60-70 ಲಕ್ಷ ರೂ. ವರೆಗೆ ಟ್ಯಾಕ್ಸ್ ಕಟ್ಟುವ ನೋಟೀಸ್ ಬಂದಿದೆ. ತೀವ್ರ ಸ್ವರೂಪದ ಆತಂಕಕ್ಕೊಳಗಾಗಿರುವ ಸಣ್ಣ ವ್ಯಾಪಾರಿಗಳು ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ, ಜುಲೈ 23 ರಂದು ತಮ್ಮ ಅಂಗಡಿಗಲ್ಲಿ ಹಾಲು, ಟೀ, ಕಾಫಿ ಮೊದಲಾದವುಗಳ ಮಾರಾಟ ನಿಲ್ಲಿಸಲಿದ್ದಾರೆ, ಮರುದಿನ ಗುಟ್ಕಾ ಸಿಗರೇಟುಗಳನ್ನು ಮಾರೋದಿಲ್ಲ ಮತ್ತು ಮೂರನೇ ದಿನ ಅಂದರೆ ಜುಲೈ 25 ರಂದು ಎಲ್ಲ ಸಣ್ಣ ವ್ಯಾಪಾರಿಗಳು ಒಗ್ಗೂಡಿ ಫ್ರೀಡಂ ಪಾರ್ಕ್ನಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ: ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ: ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಗುನ್ನ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
