ಮಹಿಳೆ ಬಟ್ಟೆ ವಾಷ್ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಚಾಮರಾಜನಗರದ ಬೂದಿತಿಟ್ಟು ಗ್ರಾಮದಲ್ಲಿ ಬಿಸಿಲಿನ ಬೇಗೆಗೆ ತಂಪು ಅರಸಿ ವಾಷಿಂಗ್ ಮಿಷನ್ ಸೇರಿದ್ದ ಹಾವನ್ನು ನೋಡಿ ಮಹಿಳೆ ಗಾಬರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಸ್ನೇಕ್ ಚಾಂಪು ಹಾವನ್ನು ರಕ್ಷಿಸಿದ್ದು, ಬೇಸಿಗೆಯಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಸದ್ಯ ವಾಷಿಂಗ್ ಮಷಿನ್ನಿಂದ ಹಾವು ರಕ್ಷಣೆಯ ವಿಡಿಯೋ ಇಲ್ಲಿದೆ.
ಚಾಮರಾಜನಗರ, ಏಪ್ರಿಲ್ 7: ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ಬಿಳಿಗಿರಿ ಎಂಬುವವರ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮನೆಯ ಹೊರಾಂಗಣದಲ್ಲಿದ್ದ ವಾಷಿಂಗ್ ಮಿಷನ್‌ನಲ್ಲಿ ಬಟ್ಟೆ ಒಗೆಯ ಹಾಕಲು ಹೋದ ಮಹಿಳೆಗೆ ಮಿಷನ್ ಒಳಗಿದ್ದ ಹಾವನ್ನು ನೋಡಿ ಶಾಕ್ ಆಗಿದೆ. ಬಿಸಿಲಿನ ಬೇಗೆಯಿಂದ ತಂಪಾದ ಜಾಗ ಅರಸಿ ಬಂದಿದ್ದ ನೀರುಹಾವು ಇದಾಗಿದ್ದು, ಉರಗ ತಜ್ಞ ಸ್ನೇಕ್ ಚಾಂಪು ಅವರು ಅದನ್ನು ರಕ್ಷಿಸಿದ್ದಾರೆ. ಬೇಸಿಗೆಯಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
Follow Us
Latest Videos
