AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ಶ್ರೀನಿವಾಸ್ ಗೌಡಗೆ ಇನ್ನೂ ಕಾಡುತ್ತಿದೆ ಬಾಯ್​​ಫ್ರೆಂಡ್ ನೆನಪು?

ಸೋನು ಶ್ರೀನಿವಾಸ್ ಗೌಡಗೆ ಇನ್ನೂ ಕಾಡುತ್ತಿದೆ ಬಾಯ್​​ಫ್ರೆಂಡ್ ನೆನಪು?

ಮಂಗಳ ರಾಜಗೋಪಾಲ್​
| Edited By: |

Updated on:Jul 02, 2026 | 12:54 PM

Share

ನಟಿ ಸೋನು ಶ್ರೀನಿವಾಸ್ ಗೌಡ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ, ಅದರಲ್ಲೂ ಮಾಜಿ ಬಾಯ್‌ಫ್ರೆಂಡ್ ಕುರಿತು ಎಮೋಷನಲ್ ಆಗಿ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ತಪ್ಪು ಕಲ್ಪನೆಗಳನ್ನು ಸ್ಪಷ್ಟಪಡಿಸಿ, ಪ್ರೀತಿ ಮತ್ತು ಸಂಬಂಧಗಳ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ಸಿನಿಮಾ ಆಫರ್‌ಗಳು ಬಂದರೆ ಸ್ವೀಕರಿಸಲು ತಾವು ಸಿದ್ಧ ಎಂದು ಅವರು ಹೇಳಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರು ಈಗ ನಟಿಯಾಗಿ ಬಡ್ತಿ ಪಡೆದಿದ್ದಾರೆ. ಅವರಿಗೆ ಓರ್ವ ಬಾಯ್​ಫ್ರೆಂಡ್ ಇದ್ದ. ಅಪಘಾತದಲ್ಲಿ ಆತ ಮೃತಪಟ್ಟ. ಈ ವೇಳೆ ಸೋನು ಸಾಕಷ್ಟು ನೊಂದಿದ್ದರು. ತಮ್ಮ ಮಾಜಿ ಬಾಯ್‌ಫ್ರೆಂಡ್‌ನ ನೆನಪಿನಿಂದ ಹೊರಬಂದಿದ್ದಾರೆಯೇ ಎಂಬ ಪ್ರಶ್ನೆಗೆ, ‘ಹೊರಗಿನಿಂದ ಹೌದು, ಆದರೆ ಒಳಗಿನಿಂದ ಇಲ್ಲ’ ಎಂದು ಸೋನು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಇನ್ನೊಬ್ಬರ ಬಗ್ಗೆ ಬರೆದಿದ್ದನ್ನು ನಂಬುತ್ತಾರೆ, ಆದರೆ ಹತ್ತಿರದವರ ಮಾತನ್ನು ಕೇಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾವು ಭಾವನಾತ್ಮಕ ವ್ಯಕ್ತಿ ಎಂದು ಒಪ್ಪಿಕೊಂಡಿರುವ ಸೋನು, ‘ನೇರವಾಗಿ ಭೇಟಿ ಮಾಡಿ ಮಾತನಾಡಿದರೆ, ನಾವು ಯಾರು ಎಂದು ತಿಳಿಯುತ್ತದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Jul 02, 2026 12:53 PM

Follow Us