Karnataka Assembly Session: ಮುನಿರತ್ನ ಮೇಲೆ ಚರ್ಚೆಗೆ ಅವಕಾಶ ಕೋರಿದ ನರೇಂದ್ರ ಸ್ವಾಮಿ, ಸ್ವಲ್ಪ ಕಾಯಬೇಕು ಎಂದ ಸ್ಪೀಕರ್

|

Updated on: Dec 13, 2024 | 1:55 PM

ಅಸಲಿಗೆ, ನರೇಂದ್ರ ಸ್ವಾಮಿ ಅವರು ಮುನಿರತ್ನ ಮೇಲೆ ಚರ್ಚೆಗೆ ಅವಕಾಶ ಕೇಳುವಾಗ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವಕ್ಫ್ ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರ ನೀಡುತ್ತಿರುತ್ತಾರೆ. ಅವರು ಉತ್ತರ ಕೊಡುವುದು ಮುಗಿಯಲಿ, ಅಮೇಲೆ ಚರ್ಚೆಗೆ ಅವಕಾಶ ಮಾಡಿಕೊಡುವ ಎಂದು ಸ್ಪೀಕರ್ ಹೇಳಿದರೂ ನರೇಂದ್ರ ಸ್ವಾಮಿ ಮೊಂಡುತನಕ್ಕೆ ಕಟ್ಟುಬೀಳುತ್ತಾರೆ.

ಬೆಳಗಾವಿ: ಇತ್ತೀಚಿಗೆ ಬಂಧನಕ್ಕೊಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಶಾಸಕ ನರೇಂದ್ರ ಸ್ವಾಮಿ ಪೀಠವನ್ನು ಕೋರಿದಾಗ ಸದನದಲ್ಲಿ ಗದ್ದಲಮಯ ಸನ್ನಿವೇಶ ಸೃಷ್ಟಿಯಾಗಿತ್ತು. ಮುನಿರತ್ನ ಬಗ್ಗೆ ರೋಷದಿಂದ ಮಾತಾಡಿದ ನರೇಂದ್ರ ಸ್ವಾಮಿ, ಬಿಜೆಪಿ ಶಾಸಕ ಜಾತಿ ನಿಂದನೆ ಮಾಡಿದ್ದಾರೆ, ಸದನದ ಬಗ್ಗೆ ಅಗೌರವದಿಂದ ಮಾತಾಡಿದ್ದಾರೆ, ಒಬ್ಬ ಮಾಜಿ ಮುಖ್ಯಮಂತ್ರಿಯವರನ್ನು ಅಪಮಾನಿಸಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ಅವರ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಹನಿಟ್ರ್ಯಾಪ್ ಆರೋಪ: ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಯತ್ನಿಸಿದ್ದರೆಂದ ಸಂತ್ರಸ್ತೆಯ ಪತಿ