Temple Tour: ಉಡುಪಿಯಿಂದ ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆ ನಿಂತ ದೇವಿ

ಚಿಕ್ಕಬಳ್ಳಾಪುರ ನಗರದ ನಿವಾಸಿಯಾಗಿರುವ ರಮೇಶಬಾಬು, ಕಡು ಬಡತನದಲ್ಲಿ ಬೆಳೆದು ತಮಗೆ ಬಂದ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವಂತೆ ಉಡುಪಿಯ ಅಂಬಲಪಾಡಿ ಮಹಾಕಾಳಿಯ ಮೊರೆ ಹೋಗಿದ್ದರು.

ಕೆಲವೊಮ್ಮೆ ತಾನು ನೆಲಸುವ ಸ್ಥಳವನ್ನ ಆ ದೇವರೇ ಆಯ್ಕೆ ಮಾಡಿಕೊಳ್ತಾನಂತೆ. ಆ ಮಾತಿಗೆ ಉದಾಹರಣೆ ಅನ್ನೋ ಹಾಗಿದೆ ಚಿಕ್ಕಬಳ್ಳಾಪುರದ ಮಹಾಕಾಳಿ ಆಲಯ. ಉಗ್ರ ಸ್ವರೂಪಿಣಿಯಾಗಿ ನೆಲೆನಿಂತು ಭಕ್ತರನ್ನ ಹರಸುತ್ತಿರುವ ತಾಯಿ ಉಡುಪಿಯಿಂದ ಬಂದು ಚಿಕ್ಕಬಳ್ಳಾಪುರದಲ್ಲಿ ನೆಲೆ ನಿಂತ ಪರಿಯೇ ಒಂದು ಚರಿತ್ರೆ. ಉಡುಪಿಯ ಅಂಬಲಪಾಡಿ ಮಹಾಕಾಳಿ ದೇವಿಯ ಭಕ್ತ ರಮೇಶಬಾಬು ಎನ್ನುವವರು, ಚಿಕ್ಕಬಳ್ಳಾಪುರದಲ್ಲಿ ಅಂಬಲಪಾಡಿ ಮಹಾಕಾಳಿ ದೇವಿಯ ದೇವಸ್ಥಾನವನ್ನು ನಿರ್ಮಾಣ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ನಿವಾಸಿಯಾಗಿರುವ ರಮೇಶಬಾಬು, ಕಡು ಬಡತನದಲ್ಲಿ ಬೆಳೆದು ತಮಗೆ ಬಂದ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವಂತೆ ಉಡುಪಿಯ ಅಂಬಲಪಾಡಿ ಮಹಾಕಾಳಿಯ ಮೊರೆ ಹೋಗಿದ್ದರು. ಭಕ್ತಿಯಿಂದ ದೇವಿಗೆ ನಡೆದುಕೊಂಡ ಕಾರಣ ಇದ್ದಕ್ಕಿದ್ದಂತೆ ಬಾಬು ಟ್ರಾವೇಲ್ಸ್ ಕಂಪನಿಯನ್ನು ಪ್ರಾರಂಭಿಸಿ ಇಂದು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

Click on your DTH Provider to Add TV9 Kannada