Temple Tour: ರಂಗನಾಥ ಸ್ವಾಮಿ ಆಲಯಕ್ಕೆ ತ್ರೇತಾಯುಗದ ಹಿನ್ನೆಲೆ ಇದೆ
ತ್ರೇತಾಯುಗದಲ್ಲಿ ರಾಮನ ಪಟ್ಟಾಭಿಷೇಕವಾಗುವ ವೇಳೆಯಲ್ಲಿ ವಿಭೀಷಣನು ತಮಿಳುನಾಡಿನ ಶ್ರೀರಂಗ ಎಂಬಲ್ಲಿ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದನಂತೆ. ಅದರ ಜ್ಞಾಪಕಾರ್ಥವಾಗಿ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದಲ್ಲಿ ಸಪ್ತ ಋಷಿಗಳು ರಂಗನಾಥ ಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿದರೆಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರ: ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋ ವಿಶೇಷ ವರದಿಯೇ ಈ ಟೆಂಪಲ್ ಟೂರ್. ನಾಡಿನ ಸಾಕಷ್ಟು ದೇವಾಲಯಗಳು ಇತಿಹಾಸ ಮತ್ತು ಸ್ಥಳ ಪುರಾಣದಿಂದ ಪ್ರಸಿದ್ಧಿಯನ್ನು ಪಡೆದಿವೆ. ಅಂತಾ ಒಂದು ದೇವಾಲಯ ಚಿಕ್ಕಬಳ್ಳಾಪುರದಲ್ಲಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಭೂನೀಳ ಸಮೇತ ಶ್ರೀರಂಗನಾಥ ಸ್ವಾಮಿ ದೇವಾಲಯ ಪೌರಾಣಿಕ ಹಿನ್ನಲೆ ಹೊಂದಿರುವ ದೇಗುಲಗಳಲ್ಲೊಂದು. ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾದ ಭೂನೀಳ ಲಕ್ಷ್ಮಿ ರಂಗನಾಥ ಆಲಯಕ್ಕೆ ತ್ರೇತಾಯುಗದ ಹಿನ್ನೆಲೆ ಇದೆ. ಸಪ್ತ ಋಷಿಗಳಿಂದ ಈ ಮೂರ್ತಿ ಪ್ರತಿಷ್ಠಾಪನೆ ಆಗಿದೆ ಎಂದು ಹೇಳಲಾಗುತ್ತದೆ.
ತ್ರೇತಾಯುಗದಲ್ಲಿ ರಾಮನ ಪಟ್ಟಾಭಿಷೇಕವಾಗುವ ವೇಳೆಯಲ್ಲಿ ವಿಭೀಷಣನು ತಮಿಳುನಾಡಿನ ಶ್ರೀರಂಗ ಎಂಬಲ್ಲಿ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದನಂತೆ. ಅದರ ಜ್ಞಾಪಕಾರ್ಥವಾಗಿ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದಲ್ಲಿ ಸಪ್ತ ಋಷಿಗಳು ರಂಗನಾಥ ಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿದರೆಂದು ಹೇಳಲಾಗಿದೆ. ಇಲ್ಲಿಯ ಗರ್ಭಗೃಹ ಬಿದಿರು ಬುಟ್ಟಿ ಆಕಾರದಲ್ಲಿದೆ. ಸ್ವಾಮಿಯು ವೈಕುಂಠದಲ್ಲಿ ಮಲಗಿರುವ ಹಾಗೆ ವಿಗ್ರಹವನ್ನು ಕೆತ್ತಲಾಗಿದೆ. ರಂಗನಾಥಸ್ವಾಮಿಯ ಪಾದದ ಬಳಿ ಒಂದು ಕಿಂಡಿ ಇದ್ದು, ಮಕರ ಸಂಕ್ರಮಣ ದಿನ ಸೂರ್ಯೋದಯ ಸಮಯದಲ್ಲಿ, ಸ್ವಾಮಿಯ ಪಾದ ಕಮಲಗಳಿಗೆ ಸೂರ್ಯನ ಕಿರಣಗಳು ಬೀಳುವುದು ವಿಶೇಷ.
ಈ ದೇವಸ್ಥಾನ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರಂಗನಾಥಸ್ವಾಮಿ ದೇವಾಲಯದ ಹೊರಗಿನ ಪ್ರಾಕಾರ ಹಾಗೂ ಗೋಪುರವನ್ನು ವಿಜಯನಗರ ಅರಸರು ಕಟ್ಟಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ದೇವಸ್ಥಾನ ನಿರ್ಮಾಣ ಶೈಲಿ ಹಾಗೂ ಗೋಪುರದ ಶೈಲಿ ವಿಜಯನಗರ ಅರಸರ ಶೈಲಿಯಲ್ಲಿದೆ. ರಂಗನಾಥಸ್ವಾಮಿಗೆ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಊರಿನ ಜನರು ಈ ದೇವಾಲಯಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇದನ್ನೂ ಓದಿ:
ಹಾಸನಾಂಬೆಯ ಮೊದಲ ದಿನದ ದರ್ಶನೋತ್ಸವ ಆರಂಭ; ಬೆಳಿಗ್ಗೆಯೇ ದೇವಾಲಯ ದತ್ತ ಲಗ್ಗೆಯಿಟ್ಟ ಸಹಸ್ರಾರು ಭಕ್ತರು
Temple Tour: ಅಮ್ಮನಗುಡ್ಡದಲ್ಲಿ ಅಮ್ಮನಾಗಿ ಕುಳಿತಿದ್ದಾಳೆ ಕುಕ್ಕುವಾಡೇಶ್ವರಿ