ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು

Updated on: Nov 11, 2025 | 10:53 PM

ನಟ, ನಿರೂಪಕ ಸೃಜನ್ ಲೋಕೇಶ್ ಅವರು ‘ಜಿಎಸ್​ಟಿ’ ಸಿನಿಮಾಗೆ ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಮಾಣಿಕವಾಗಿ ಮಾತನಾಡಿದರು. ತಾವು ನಿರ್ದೇಶಕ ಆಗಿದ್ದು ಯಾಕೆ ಎಂಬುದನ್ನು ಕೂಡ ಅವರು ವಿವರಿಸಿದರು. ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ ನೋಡಿ..

ನಟ, ನಿರೂಪಕ ಸೃಜನ್ ಲೋಕೇಶ್ ಅವರು ‘ಜಿಎಸ್​ಟಿ’ (GST) ಸಿನಿಮಾಗೆ ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಮಾಣಿಕವಾಗಿ ಮಾತನಾಡಿದರು. ‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಇದು ನನ್ನ ಕನಸಿನಲ್ಲಿ ಬಂದ ಕಥೆ. ನನ್ನ ಸಿನಿಮಾ ಬಗ್ಗೆ ನಾನು ಮಾತನಾಡುವುದು ತಪ್ಪಾಗುತ್ತದೆ. ಜನರು ನೋಡಿ ಅಭಿಪ್ರಾಯ ತಿಳಿಸಬೇಕು. ಅತಿ ಆತ್ಮವಿಶ್ವಾಸದಿಂದ ಎಲ್ಲರೂ ಹೇಳಿಕೊಳ್ಳುತ್ತಾರೆ. 650ಕ್ಕೂ ಹೆಚ್ಚು ಸಿನಿಮಾ ನಾನು ಪ್ರಚಾರ ಮಾಡಿದ್ದೇನೆ. ಯಾರಿಗೂ ಗೊತ್ತಿಲ್ಲದೇ ಇರುವ ಸಿನಿಮಾ ಲ್ಯಾಂಡ್​ ಮಾರ್ಕ್ ಆಗಿದೆ. ಭಾರಿ ನಿರೀಕ್ಷೆ ಇದ್ದ ಸಿನಿಮಾಗಳು ಸಾಧಾರಣ ಆಗಿದ್ದನ್ನು ನೋಡಿದ್ದೇನೆ. ನನ್ನ ಸಿನಿಮಾ ಅತ್ಯುತ್ತಮ, ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ. ಪ್ರಮಾಣಿಕವಾಗಿ, ನಿಷ್ಠೆಯಿಂದ ಒಂದು ಸಿನಿಮಾ ಮಾಡಿದ್ದೇನೆ. ಜನರು ನೋಡಿ ನಗಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇನೆ’ ಎಂದು ಸೃಜನ್ ಲೋಕೇಶ್ (Srujan Lokesh) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More