ಡಾಲಿ ಧನಂಜಯ ಮದುವೆ ರಿಷಪ್ಷನ್ ಹಾಕಿರುವ ಸೆಟ್ ಭವ್ಯ ಅಂತ ಹೇಳಿದರೂ ಅಂಡರ್ ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ!
ವಿದೇಶಿ ಚಿತ್ರರಂಗದ ಕೆಲ ಗಣ್ಯರು, ಕಲಾವಿದರು ಡಾಲಿ ಧನಂಜಯ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ನಿವಾಸಕ್ಕೆ ಧನಂಜಯ ತೆರಳಿ ಮದುವೆ ಕರೆಯೋಲೆ ನೀಡಿದ್ದನ್ನು ಟಿವಿ9 ವರದಿ ಮಾಡಿದೆ. ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ವ್ಹೀಲ್ ಚೇರ್ ನಲ್ಲಿ ಓಡಾಡುತ್ತಿದ್ದಾರೆ.
ಮೈಸೂರು: ಡಾಲಿ ಧನಂಜಯ್ ಮತ್ತು ಡಾ ಧನ್ಯತಾ ಅವರ ಅದ್ದೂರಿ ಆರತಕ್ಷತೆಗೆ ಕ್ಷಣಗಣನೆ ಶುರುವಾಗಿದೆ. ರಿಷಪ್ಷನ್ ಗೆ ರೆಡಿಯಾಗಿರುವ ಭವ್ಯವಾದ ವೇದಿಕೆಯನ್ನು ಇಲ್ಲಿ ನೋಡಬಹುದು. ಖ್ಯಾತ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಅವರು ಮೈಸೂರು ಎಕ್ಸಿಬಿಷನ್ ಆವರಣದಲ್ಲಿ ಆರತಕ್ಷತೆಯ ಸೆಟ್ ಹಾಕಿಸಿದ್ದಾರೆ. ಇನ್ ಫ್ಯಾಕ್ಟ್ ಮದುವೆಯ ಎಲ್ಲ ಉಸ್ತುವಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಈ ವಿಶಾಲ ಸೆಟ್ನ ಭವ್ಯತೆ ನೋಡುಗರ ಮನಸೂರೆಗೊಳ್ಳುತ್ತದೆ. ವೇದಿಕೆಯ ಮೇಲೆಯೇ ಸುಮಾರು ನೂರಿನ್ನೂರು ಜನ ನಿಲ್ಲುವಷ್ಟು ಸ್ಥಳವನ್ನು ಕಲ್ಪಿಸಲಾಗಿದೆ. ಊಟದ ಹಾಲ್ ಕಡೆ ತೆರಳಲು ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು ಇದರಿಂದಾಗಿ ನೂಕುನುಗ್ಗಲು ಅಗಲಾರದು. ಒಂದು ಅಂದಾಜಿನ ಪ್ರಕಾರ ಸುಮಾರು 25,000-30,000 ಸಾವಿರ ಜನ ಅರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ