ಪ್ರತಿಮೆ ನಿರ್ಮಾಣಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದ ಡಾ. ರಾಮೇಶ್ವರ್ ರಾವ್

TV9 Web
| Updated By: ganapathi bhat

Updated on: Feb 05, 2022 | 9:30 PM

ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ರಾಜ್ಯ, ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದು ಕಾರ್ಯಕ್ರಮದಲ್ಲಿ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ರಾಮೇಶ್ವರ್ ರಾವ್ ಮಾತನಾಡಿದ್ದಾರೆ.

ಹೈದರಾಬಾದ್: ಶ್ರೀ ರಾಮಾನುಜಾಚಾರ್ಯರ 216 ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ರಾಜ್ಯ, ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದು ಕಾರ್ಯಕ್ರಮದಲ್ಲಿ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ರಾಮೇಶ್ವರ್ ರಾವ್ ಮಾತನಾಡಿದ್ದಾರೆ.

ಡಾ.ಜೆ. ರಾಮೇಶ್ವರ್‌ ರಾವ್‌ ಅವರು ಕೇವಲ ಉದ್ಯಮಿ ಅಲ್ಲ. ಡಾ.ರಾಮೇಶ್ವರ್‌ ರಾವ್‌ ಧರ್ಮಪಾಲನೆ ಮಾಡುವ ಸದ್ಗುಣಿ. ಈ ಕಾರ್ಯಕ್ರಮದ ಮೂಲ ಶಕ್ತಿ ಡಾ. ರಾಮೇಶ್ವರ್‌ ರಾವ್. ಧರ್ಮಪಾಲನೆ ಜತೆ ವೈದಿಕ ಪ್ರೇಮಿಯಾಗಿರುವ ಡಾ.ರಾವ್ ಸತ್ಯ ಮಾರ್ಗ ಸ್ವೀಕರಿಸುವವರು ಎಂದು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಚಿನ್ನಜೀಯರ್ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮೈ ಹೋಮ್ ಗ್ರೂಪ್ ಚೇರ್ಮನ್‌ ಡಾ. ರಾಮೇಶ್ವರ್ ರಾವ್ ಬಗ್ಗೆ ಚಿನ್ನಜೀಯರ್ ಶ್ರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಮೇಶ್ವರ್ ರಾವ್ ಸೇವೆಯನ್ನು ಚಿನ್ನಜೀಯರ್ ಶ್ರೀ ಕೊಂಡಾಡಿದ್ದಾರೆ.

ಇದನ್ನೂ ಓದಿ: Statue of Equality: ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆ; ಫೋಟೊಗಳು ಇಲ್ಲಿವೆ

ಇದನ್ನೂ ಓದಿ: ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ