ನಿವೃತ್ತರಾದ ಶಿಕ್ಷಕರಿಗೆ ವಿದ್ಯಾರ್ಥಿಗಳ ಕಣ್ಣೀರಿನ ವಿದಾಯ, ತೆರೆದ ವಾಹನದಲ್ಲಿ ಮೆರವಣಿಗೆ
ನಿವೃತ್ತಿ ಹೊಂದಿದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾಲಿಬೆಂಜಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಮಲ್ಲಿನಾಥ ರಾಚೋಟಿ ಅವರಿಗೆ ವಿದ್ಯಾರ್ಥಿಗಳು ಕಣ್ಣೀರಿನ ಬೀಳ್ಕೊಡುಗೆ ಕೊಟ್ಟಿದ್ದು, ತೆರೆದ ವಾಹನದಲ್ಲಿ ಮೆರವಣಿಗೆ ಕೂಡ ನಡೆಸಿದ್ದಾರೆ.
ಯಾದಗಿರಿ: ಹೆತ್ತವರ ಉತ್ತಮ ನಡವಳಿಕೆಗಳು ಮಕ್ಕಳಲ್ಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ತಂದೆ ತಾಯಿಯನ್ನು ಮಕ್ಕಳು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕರ ಹೊರತಾಗಿ ಮಕ್ಕಳು ಕಳೆದುಕೊಳ್ಳಲು ಇಷ್ಟಪಡದೇ ಇರುವವರೆಂದರೆ ಶಿಕ್ಷಕರು. ಕೆಲವು ಶಿಕ್ಷಕರು ಪ್ರೀತಿಯಿಂದ ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಪಾಠ ಹೇಳಿಕೊಡುತ್ತಾರೆ. ಇಂತಹ ಶಿಕ್ಷಕರು ನಿವೃತ್ತಿ ಹೊಂದುವಾಗ ವಿದ್ಯಾರ್ಥಿಗಳು ಕಣ್ಣೀರು ಸುರಿಸುತ್ತಾರೆ. ಇಂತಹ ಘಟನೆ ಯಾದಗಿರಿಯಲ್ಲೂ ನಡೆದಿದೆ. ಸುರಪುರ ತಾಲೂಕಿನ ಬಾಲಿಬೆಂಜಿ ಗ್ರಾಮದ ಸರ್ಕಾರಿ ಶಾಲೆಯ ಮಲ್ಲಿನಾಥ ರಾಚೋಟಿ ಎಂಬ ಶಿಕ್ಷಕರು ನಿವೃತ್ತಿ ಹೋಂದಿದ್ದು, ಇವರಿಗೆ ವಿದ್ಯಾರ್ಥಿಗಳು ಕಣ್ಣೀರಿನ ವಿದಾಯ ಹೇಳಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸೇರಿ ಶಿಕ್ಷಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ವಿದ್ಯಾರ್ಥಿಗಳ ಪ್ರೀತಿಗೆ ಶಿಕ್ಷಕ ಮಲ್ಲಿನಾಥ ಅವರು ಭಾವುಕರಾದರು.
Published on: Jul 31, 2022 12:17 PM
Latest Videos