ಸೋಲು-ಗೆಲುವು ರಾಜಕೀಯ ಪಕ್ಷವೊಂದರ ಅಸ್ತಿತ್ವವನ್ನು ನಿರ್ಧರಿಸುವುದಿಲ್ಲ: ಹೆಚ್ ಡಿ ದೇವೇಗೌಡ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜನ ನೀಡಿರುವ ತೀರ್ಮನ್ನು ಸಮಾಧಾನಚಿತ್ತದಿಂದ ಸ್ವೀಕರಿಸಿದ್ದೇನೆ, ಅವರ ತೀರ್ಪಿನ ಬಗ್ಗೆ ತಾನ್ಯಾವತ್ತೂ ಲಘುವಾಗಿ ಮಾತಾಡಿಲ್ಲ, ಈ ಬಾರಿ ಸೋಲಿಸಿದ ಜನರೇ ತಮ್ನನ್ನು ಮುಂದಿನ ಬಾರಿ ಗೆಲ್ಲಿಸುತ್ತಾರೆ, ತನ್ನ ವೈಯಕ್ತಿಕ ರಾಜಕೀಯ ಅನುಭವದಿಂದ ಕಂಡುಕೊಂಡಿರುವ ಸತ್ಯವಿದು ಎಂದು ದೇವೇಗೌಡ ಹೇಳಿದರು.
ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಸಭಾ ಸದಸ್ಯ ಹೆಚ್ ಡಿ ದೇವೇಗೌಡ ಅವರು, ಸಿದ್ದರಾಮಯ್ಯರ ಮಾತುಗಳಿಂದ ತಾನೇನೂ ಧೃತಿಗೆಟ್ಟಿಲ್ಲ, ಸಿದ್ದರಾರಾಮಯ್ಯ ರಾಜಕೀಯಕ್ಕೆ ಬಂದಿದ್ದು ಯಾವಾಗಿನಿಂದ ಎಲ್ಲರಿಗಿಂತ ಚೆನ್ನಾಗಿ ತನಗೆ ಗೊತ್ತು, ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ತಾನು ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ, ಪಕ್ಷದ ಕೆಲಸಗಳನ್ನು ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಮತ್ತು ಪಕ್ಷದ ಶಾಸಕರು ನಿರ್ವಹಿಸುತ್ತಿದ್ದಾರೆ, ರಾಜಕಾರಣದಲ್ಲಿ ಹಲವು ಬಾರಿ ಸೋತಿದ್ದೇವೆ ಗೆದ್ದಿದ್ದೇವೆ, ಸೋಲು-ಗೆಲುವು ಒಂದು ಪಕ್ಷದ ಅಸ್ತಿತ್ವನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಹೆಚ್ಡಿ ದೇವೇಗೌಡ ಮಹತ್ವದ ಸುಳಿವು
Published on: Dec 07, 2024 02:49 PM