AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಕಿ-ಯಶೋದೆಯಂತೆ ಕನ್ನಡ ಮತ್ತು ಮರಾಠಿ: ಭಾಷಾ ಬಾಂಧವ್ಯದ ಬಗ್ಗೆ ಸುಧಾಮೂರ್ತಿ ಅವರ ಮನದಾಳದ ಮಾತು!

ದೇವಕಿ-ಯಶೋದೆಯಂತೆ ಕನ್ನಡ ಮತ್ತು ಮರಾಠಿ: ಭಾಷಾ ಬಾಂಧವ್ಯದ ಬಗ್ಗೆ ಸುಧಾಮೂರ್ತಿ ಅವರ ಮನದಾಳದ ಮಾತು!

ಭಾವನಾ ಹೆಗಡೆ
|

Updated on: Apr 29, 2026 | 1:19 PM

Share

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಂಬಂಧವನ್ನು ತಾಯಿ ಮತ್ತು ಮೌಶಿ (ಚಿಕ್ಕಮ್ಮ) ಬಾಂಧವ್ಯಕ್ಕೆ ಹೋಲಿಸಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಮೂರ್ತಿ ತಮ್ಮ ಜೀವನದಲ್ಲಿ ಈ ಎರಡು ಭಾಷೆಗಳ ಸ್ಥಾನವನ್ನು ಸುಂದರವಾಗಿ ಬಣ್ಣಿಸುತ್ತಾರೆ. ನನಗೆ ಕನ್ನಡ ನನ್ನ ಹೆತ್ತ ತಾಯಿಯಿದ್ದಂತೆ, ಆದರೆ ಮರಾಠಿ ಭಾಷೆ ನನಗೆ ಚಿಕ್ಕಮ್ಮನಿದ್ದಂತೆ. ಶ್ರೀಕೃಷ್ಣನಿಗೆ ದೇವಕಿ ಮತ್ತು ಯಶೋದೆಯೆಂಬ ಇಬ್ಬರು ತಾಯಂದಿರಿದ್ದಂತೆ, ನನಗೂ ಈ ಎರಡು ಭಾಷೆಗಳು ಅಷ್ಟೇ ಪ್ರಿಯವಾದವು ಎಂದು ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 29: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಂಬಂಧವನ್ನು ತಾಯಿ ಮತ್ತು ಮೌಶಿ (ಚಿಕ್ಕಮ್ಮ) ಬಾಂಧವ್ಯಕ್ಕೆ ಹೋಲಿಸಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಮೂರ್ತಿ ತಮ್ಮ ಜೀವನದಲ್ಲಿ ಈ ಎರಡು ಭಾಷೆಗಳ ಸ್ಥಾನವನ್ನು ಸುಂದರವಾಗಿ ಬಣ್ಣಿಸುತ್ತಾರೆ. ನನಗೆ ಕನ್ನಡ ನನ್ನ ಹೆತ್ತ ತಾಯಿಯಿದ್ದಂತೆ, ಆದರೆ ಮರಾಠಿ ಭಾಷೆ ನನಗೆ ಚಿಕ್ಕಮ್ಮನಿದ್ದಂತೆ. ಶ್ರೀಕೃಷ್ಣನಿಗೆ ದೇವಕಿ ಮತ್ತು ಯಶೋದೆಯೆಂಬ ಇಬ್ಬರು ತಾಯಂದಿರಿದ್ದಂತೆ, ನನಗೂ ಈ ಎರಡು ಭಾಷೆಗಳು ಅಷ್ಟೇ ಪ್ರಿಯವಾದವು ಎಂದು ಹೇಳಿದ್ದಾರೆ.

ನಾವು ಎಲ್ಲಿ ವಾಸಿಸುತ್ತೇವೆಯೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು ಎಂದ ಅವರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮರಾಠಿ ಕಲಿಯಬೇಕು, ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡ ಕಲಿಯಬೇಕು. ಭಾಷೆ ಎಂಬುದು ಮನುಷ್ಯರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ಗೋಡೆಯಾಗಬಾರದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More