ಸುಳ್ಳು ಹೇಳಿ ಅನಗತ್ಯ ಸನ್ನಿವೇಶಗಳಿಗೆ ಕಾರಣರಾದ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆಯೇ?
ನಾನು ಹೇಳಿದ್ದು ಸುಳ್ಳು, ಕೊಟ್ಟಿರೋ ದೂರನ್ನು ವಾಪಸ್ಸು ಪಡೆಯುವೆ, ನನ್ನನ್ನು ಬಿಟ್ಟುಬಿಡಿ ಅಂತ ಸುಜಾತ ಭಟ್ ಅಧಿಕಾರಿಗಳ ಮುಂದೆ ಗೋಗರೆದರು ಎಂಬ ವದಂತಿ ಇದೆ. ಅದರೆ ಅವರನ್ನು ಅದು ಹೇಗೆ ಬಿಡೋದು ಸಾಧ್ಯ? ಅವರ ಮೇಲೆ ಬೇರೆ ಯಾರಾದರೂ ಒತ್ತಡ ಹಾಕಿ ಸುಳ್ಳು ಹೇಳಿಸಿದ್ದರೆ ಅದು ಯಾರು ಅಂತ ಗೊತ್ತಾಗಬೇಕಲ್ಲ? ಅವರಿಂದ ಎಲ್ಲ ಸತ್ಯಗಳನ್ನು ಕಕ್ಕಿಸದ ಹೊರತು ಅಧಿಕಾರಿಗಳೇನೂ ಬಿಡಲಾರರು.
ಬೆಂಗಳೂರು, ಆಗಸ್ಟ್ 27: ಅನನ್ಯಾ ಭಟ್ (Ananya Bhat) ನನ್ನ ಮಗಳು ಅಂತ ಸುಳ್ಳು ಹೇಳಿ ರಾಜ್ಯಾದಾದ್ಯಂತ ಭಾನಗಡಿ ಸೃಷ್ಟಿಸಿದ ಹಿರಿಯ ಮಹಿಳೆ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವು ಈಗ ಆದಂತಿದೆ. ಎಸ್ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಮಧ್ಯಾಹ್ನದ ಊಟ ಕೂಡ ಅವರಿಗೆ ಎಸ್ಐಟಿ ಠಾಣೆಯಲ್ಲೇ ಒದಗಿಸಲಾಗಿದೆ. ಎಸ್ಐಟಿ ರಚನೆಯಾದಾಗಿನಿಂದ ಮಾಧ್ಮಮಗಳ ಮುಂದೆ ಸ್ಥಿರವಲ್ಲದ ಹೇಳಿಕೆಗಳನ್ನು ನೀಡುತ್ತಾ ಜನರ ಶಂಕೆಗಳಿಗೆ ಈಡಾಗಿದ್ದ ಸುಜಾತ ಭಟ್ ತನಿಖಾ ತಂಡದ ಅಧಿಕಾರಿಗಳ ಎದುರು ತತ್ತರಿಸಿಹೋಗಿದ್ದಾರೆ ಎಂಬ ವದಂತಿಯಿದೆ. ಎಸ್ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸುಜಾತ ಅವರ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ನೋಟಿಸ್ ಕೊಡದಿದ್ದರೂ ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

