‘ಈಗ ಪರಿಸ್ಥಿತಿ ಬೇರೆ ಇದೆ’; ಚುನಾವಣೆ ಪ್ರಚಾರಕ್ಕೆ ದರ್ಶನ್, ಯಶ್ ಬೆಂಬಲದ ಬಗ್ಗೆ ಸುಮಲತಾ ಮಾತು
ಸುಮಲತಾ ಅಂಬರೀಷ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದ ಬಾರಿ ದರ್ಶನ್ ಹಾಗೂ ಯಶ್ ಒಟ್ಟಾಗಿ ಬಂದು ಅವರನ್ನು ಬೆಂಬಲಿಸಿ ಪ್ರಚಾರ ಮಾಡಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬೇರೆ ರೀತಿ ಇದೆ ಎಂಬುದು ಸುಮಲತಾ ಮಾತು.
ಲೋಕಸಭೆ ಚುನಾವಣೆ ಸಮೀಪಿಸಿದೆ. ಟಿಕೆಟ್ ಆಕಾಂಕ್ಷಿಗಳು ಮಾಧ್ಯಮದ ಎದುರು ಬಂದು ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಟಿ ಸುಮಲತಾ ಅಂಬರೀಷ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದ ಬಾರಿ ದರ್ಶನ್ ಹಾಗೂ ಯಶ್ (Yash) ಒಟ್ಟಾಗಿ ಬಂದು ಅವರನ್ನು ಬೆಂಬಲಿಸಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬೇರೆ ರೀತಿ ಇದೆ ಎಂಬುದು ಸುಮಲತಾ ಮಾತು. ಅದಕ್ಕೆ ಕಾರಣ ಅವರು ಒಂದು ಪಕ್ಷವನ್ನು ಪ್ರತಿನಿಧಿಸುತ್ತಿರುವುದು. ‘ನಾನು ಪ್ಲ್ಯಾನ್ ಮಾಡಿ ಏನೂ ಮಾಡಿಲ್ಲ. ಕಳೆದ ಬಾರಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ನನ್ನ ಆಪ್ತರು ಗಟ್ಟಿಯಾಗಿ ನನ್ನ ಪರ ನಿಂತರು. ನಾನು ಈ ಬಾರಿ ಒಂದು ಪಕ್ಷದಿಂದ ನಿಲ್ಲುತ್ತಿದ್ದೇನೆ. ಪಕ್ಷದ ನಾಯಕರು ಕೂಡ ಇರುತ್ತಾರೆ. ಎರಡೂ ಪರಿಸ್ಥಿತಿ ಬೇರೆ ರೀತಿ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ