ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಇಲ್ಲೂ ಮೊಳಗಿತು ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು!

|

Updated on: Jan 21, 2025 | 2:34 PM

ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಕಾಂಗ್ರೆಸ್ ಪಕ್ಷದ ದಲಿತ ಮಿನಿಸ್ಟ್ರುಗಳು ತಾವೊಂದು ಪ್ರತ್ಯೇಕ ಬಣ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ, ಉದ್ದೇಶಿತ ಡಿನ್ನರ್ ಮೀಟಿಂಗ್ ರದ್ದಾಗಿದ್ದು ಅವರಲ್ಲಿ ಬೇಸರವನ್ನುಂಟು ಮಾಡಿದೆ. ಮೀಟಿಂಗ್ ರದ್ದಾಗಲು ಆಗ ದೆಹಲಿಯಲ್ಲಿದ್ದ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಅವರು ಭಾವಿಸಿದ್ದಾರೆ. ಏತನ್ಮಧ್ಯೆ ಕರ್ನಾಟಕ ಕಾಂಗ್ರೆಸ್ ನಲ್ಲಾಗುತ್ತಿರುವ ಬೆಳವಣಿಗೆಗಳಿಂದ ವ್ಯಗ್ರಗೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಎಲ್ಲರೂ ಬಾಯ್ಮುಚ್ಚಿಕೊಂಡು ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ಬೆಳಗಾವಿ: ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನು ಕೂಡಿಸಿಕೊಂಡು ಮಾತಾಡಿದ್ದೇಯಾದರೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲು ಹೆಚ್ಚು ಕಡಿಮೆ ಒಂದು ವರ್ಷ ಬೇಕು. ಆದರೆ ಆಗಲೇ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಶಿವಕುಮಾರ್ ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸಿದ್ದರೆ ಕುರ್ಚಿ ಮೇಲೆ ಅಸೆ ನೆಟ್ಟು ಕೂತಿರುವ ದಲಿತ ನಾಯಕರು ಟವೆಲ್ ಹಾಕುವ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಅಚರಣೆ ನಡೆಯುತ್ತಿದ್ದು ಶಿವಕುಮಾರ್ ಬಣದ ಕೆಲವು ಕಾರ್ಯಕರ್ತರು ಅವರ ಫೋಟೋಗಳನ್ನು ಕೈಯಲ್ಲಿ ಹಿಡಿದು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಪ್ರದರ್ಶನ ನಡೆಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಗಾಂಧಿ ಪುತ್ಥಳಿಯನ್ನು ನೂತನ ಶೈಲಿಯಲ್ಲಿ ಅನಾವರಣಗೊಳಿಸಿದ ಮಲ್ಲಿಕಾರ್ಜುನ ಖರ್ಗೆ

Published on: Jan 21, 2025 02:31 PM