ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ: ಮುಸ್ಲಿಂ ಮನೆಯಲ್ಲಿ ಕ್ರೈಸ್ತನಿಂದ ಪ್ರತಿಷ್ಠಾಪನೆಯಾದ ಗಣಪತಿ ಇಲ್ಲಿ ನೋಡಿ

Edited By:

Updated on: Aug 28, 2025 | 10:40 AM

ವಿದೇಶಿ ಪ್ರಜೆಯೊಬ್ಬರು, ಅದರಲ್ಲೂ ಕ್ರೈಸ್ತ ಧರ್ಮಕ್ಕೆ ಸೇರಿದವರು ಮುಸ್ಲಿಂ ಸಮುದಾಯದವರ ಮನೆಯಲ್ಲಿ ಹಿಂದೂ ದೇವರಾದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಹೇಗಿರಬಹುದು!? ಇಂಥದ್ದೊಂದು ಸ್ವಾರಸ್ಯಕರ ವಿದ್ಯಮಾನಕ್ಕೆ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಸಾಕ್ಷಿಯಾಗಿದೆ. ಮುಸ್ಲಿಂ ವ್ಯಕ್ತಿ ಮನೆಯಲ್ಲಿ ಬಾಡಿಗೆಗೆ ಇರುವ ಸ್ವಿಟ್ಜರ್ಲೆಂಡ್ ಪ್ರಜೆ ಮಾರ್ಟಿನ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಎಲ್ಲರೂ ಜತೆಯಾಗಿ ಹಬ್ಬ ಆಚರಣೆ ಮಾಡಿದ್ದಾರೆ. ವಿಡಿಯೋ ಇಲ್ಲಿದೆ.

ಕೊಪ್ಪಳ, ಆಗಸ್ಟ್ 28: ಸ್ವಿಟ್ಜರ್ಲೆಂಡ್ ಪ್ರಜೆ ಮಾರ್ಟಿನ್ ಎಂಬವರು ಕರ್ನಾಟಕದ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಮಾರ್ಟಿನ್ ಕ್ರೈಸ್ತ ಸಮುದಾಯದವರು. ಇರುವುದು ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಬಾಡಿಗೆಗೆ! ಕಳೆದ ವರ್ಷ ಆನೆಗೊಂದಿಗೆ ಆಗಮಿಸಿರುವ ಮಾರ್ಟಿನ್, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆನೆಗೊಂದಿಯ ಮೆಹಬೂಬ್ ದಸ್ತಗಿರಿ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದು, ಅಲ್ಲಿಯೇ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ