ಜಾವಗಲ್‌ನಲ್ಲಿ ನಡೆಯುತ್ತಿದ್ದ ತಾಲೂಕು ಖೋಖೋ ಪಂದ್ಯಾಟ – ಮಾರಾಮಾರಿ, ಕಿಡಿಗೇಡಿಗಳಿಂದ ಅಡ್ಡಿ
ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಖೋ ಖೋ ಆಟಗಾರರು ಹಾಗೂ ತೀರ್ಪುಗಾರರ ಜೊತೆ ಜಗಳ ತೆಗೆದ ಕೆಲ ಕಿಡಿಗೇಡಿಗಳು ಪದೇ ಪದೇ ಫೈನಲ್ ಪಂದ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ತಿರುಗಿದೆ. ಸರಿಯಾಗಿ ಪಂದ್ಯಾವಳಿ ಆಯೋಜಿಸದ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ. ಗಲಾಟೆ ಏರ್ಪಟ್ಟ ಹಿನ್ನೆಲೆಯಲ್ಲಿ ಖೋಖೋ ಫೈನಲ್ ಪಂದ್ಯಾಟ ಅರ್ಧಕ್ಕೆ ನಿಂತಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದಲ್ಲಿ (Javagal, Hassan) ನಡೆಯುತ್ತಿದ್ದ ತಾಲೂಕು ಮಟ್ಟದ ಖೋಖೋ (Khokho) ಪಂದ್ಯಾಟದ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಆಟಗಾರರು ಹಾಗೂ ತೀರ್ಪುಗಾರರ ಜೊತೆ ಕೆಲ ಕಿಡಿಗೇಡಿಗಳಿಂದ ಜಗಳ ಏರ್ಪಟ್ಟಿದೆ. ಖೋಖೋ ಫೈನಲ್ ಪಂದ್ಯದ ವೇಳೆ ಯುವಕರ ಗುಂಪೊಂದು ಅರಸೀಕೆರೆ ನಗರದ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.
ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಖೋ ಖೋ ಆಟಗಾರರು ಹಾಗೂ ತೀರ್ಪುಗಾರರ ಜೊತೆ ಜಗಳ ತೆಗೆದ ಕೆಲ ಕಿಡಿಗೇಡಿಗಳು (Miscreants) ಪದೇ ಪದೇ ಫೈನಲ್ ಪಂದ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ತಿರುಗಿದೆ. ಸರಿಯಾಗಿ ಪಂದ್ಯಾವಳಿ ಆಯೋಜಿಸದ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ. ಗಲಾಟೆ ಏರ್ಪಟ್ಟ ಹಿನ್ನೆಲೆಯಲ್ಲಿ ಖೋಖೋ ಫೈನಲ್ ಪಂದ್ಯಾಟ ಅರ್ಧಕ್ಕೆ ನಿಂತಿದೆ. ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಸರಿಯಾಗಿ ಪಂದ್ಯಾವಳಿ ಆಯೋಜನೆ ಮಾಡದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ