ಟೀಂ ಇಂಡಿಯಾ ಸ್ಟ್ರಾಂಗ್ ಆಗಿದೆ, ನಾಳೆ ಪಾಕಿಸ್ತಾನದ ವಿರುದ್ಧ ಗೆದ್ದೇ ಗೆಲ್ಲುತ್ತದೆ: ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಆರೋಗ್ಯ ಸಚಿವನಿಗೆ ಕೇಳಿದ ಪ್ರಶ್ನೆಯನ್ನೇ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಆಟೀಲ್ ಅವರಿಗೆ ಕೇಳಿದಾಗ, ಅವರಸರದಲ್ಲಿದ್ದವರಂತೆ ಮಾತಾಡಿದ ಅವರು ಖಂಡಿತವಾಗಿಯೂ ಭಾರತ ನಾಳೆ ಗೆಲ್ಲಲಿದೆ ಎಂದು ಮಾತ್ರ ಹೇಳಿದರು. ಚಾಂಪಿಯನ್ಸ್ ಟ್ರೋಫಿಗಾಗಿ ನಾಳೆ ದುಬೈನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ವಿಜಯಪುರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಕ್ಕಾ ಕ್ರಿಕೆಟ್ ಅಭಿಮಾನಿ. ವಿಜಯಪುರ ಪ್ರವಾಸದಲ್ಲಿರುವ ಅವರನ್ನು ಮಾಧ್ಯಮದವರು ಸುತ್ತುವರಿದು ಸರ್, ನಾಳಿನ ಪಂದ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ಕೇಳಿದಾಗ, ಇಂಡಿಯಾ ಆಡುವ ಪಂದ್ಯಗಳನ್ನೆಲ್ಲ ಗೆಲ್ಲಲಿ ಅಂತ ನಾವೆಲ್ಲ ಆಶಿಸುತ್ತೇವೆ, ಆದರೆ ಪಾಕಿಸ್ತಾನದ ವಿರುದ್ಧ ಆಡುವಾಗ ಭಾರತ ಗೆದ್ದೇ ಗೆಲ್ಲಬೇಕೆಂದು ಹೇಳುತ್ತೇವೆ. ಟೀಂ ಇಂಡಿಯಾ ಬಲಿಷ್ಠವಾಗಿರುವುದರಿಂದ ನಾಳೆ ನಡೆಯಲಿರುವ ಪಂದ್ಯವನ್ನೂ ಗೆಲ್ಲಲಿದೆ, ಕೇವಲ ರವಿವಾರದ ಪಂದ್ಯ ಮಾತ್ರವಲ್ಲ, ಚಾಂಪಿಯನ್ಸ್ ಟ್ರೋಫಿಯನ್ನೂ ಭಾರತ ಗೆದ್ದುಕೊಂಡು ಬರಲಿ ಎಂದು ಹಾರೈಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತ-ಪಾಕಿಸ್ತಾನ ನಡುವೆ ಸೂಪರ್ ಸಂಡೇಯ ರೋಚಕ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ರೆಡಿಯಾಗಿದ್ದೀರಾ?