ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ನಿರ್ದೇಶಕ ತರುಣ್ ಸುಧೀರ್ ಅವರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಅವರ ಜೊತೆ ಪತ್ನಿ ಸೋನಲ್ ಮಾಂತೆರೋ ಕೂಡ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್ ಸುಧೀರ್ ಅವರು ದರ್ಶನ್ ಅವರನ್ನು ನೆನಪಿಸಿಕೊಂಡರು. ‘ಈ ಬಾರಿ ದರ್ಶನ್ ಅವರು ಬಂದಿಲ್ಲ. ಹೊರಗೆ ಇದ್ದಿದ್ದರೆ ಅವರು ಖಂಡಿತವಾಗಿಯೂ ಬರುತ್ತಿದ್ದರು’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ನಂತರ ನಿರ್ದೇಶಕ ತರುಣ್ ಸುಧೀರ್ ಹೇಳಿಕೆ ನೀಡಿದ್ದಾರೆ. ‘ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ. ಮದುವೆಯಾಗಿ ಮೊದಲ ಬಾರಿ ಬಂದಿರೋದು ವಿಶೇಷ. ಜೀವನ ಪೂರ್ತಿ ಹೀಗೆ ಖುಷಿಯಾಗಿ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಪ್ರತಿ ವರ್ಷ ನಾನು ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೆ. ಕಳೆದ ವರ್ಷ ಶೂಟಿಂಗ್ ಇದ್ದಿದ್ದರಿಂದ ಬರಲಾಗಲಿಲ್ಲ. ಕಳೆದ ವರ್ಷ ಸೋನಾಲ್ ಬಂದಿದ್ದರು. ಇಲ್ಲಿಗೆ ಬಂದಾಗ ಒಂದು ಪಾಸಿಟಿವ್ ಎನರ್ಜಿ ಇರುತ್ತದೆ’ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ

