ಬಿಜೆಪಿ ನಾಯಕರು ಪಾದಯಾತ್ರೆ ಮಾಡಿದಾಗಲೇ ಅದು ರಾಜಕೀಯ ಪ್ರೇರಿತ ಅಂತ ಹೇಳಿದ್ದೆ: ಡಿಕೆ ಶಿವಕುಮಾರ್
ಲೋಕಾಯುಕ್ತ ಒಂದು ಸಂವೈಧಾನಿಕ ಸಂಸ್ಥೆ, ಅದರ ನಿರ್ಣಯಗಳನ್ನು ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಮ್ ಕೋರ್ಟ್ ಆದೇಶವೊಂದನ್ನು ನೀಡಿದೆ. ಸಿಬಿಐ ಮತ್ತು ಚುನಾವಣಾ ಆಯೋಗದಂತೆಯೇ ಲೋಕಾಯುಕ್ತವೂ ಸ್ವಾಯತ್ತ ಸಂಸ್ಥೆ ಎಂದು ಹೇಳಿದ ಶಿವಕುಮಾರ್ ಲೋಕಾಯುಕ್ತವೆಂದರೆ ಪೊಲೀಸಲ್ಲ, ಅದರ ಮೇಲೆ ಮುಖ್ಯಮಂತ್ರಿಯವರಿಗೆ ನಿಯಂತ್ರಣ ಇರೋದಿಲ್ಲ, ಸಿಎಂ ಹೇಳಿದಂತೆ ಅಧಿಕಾರಿಗಳು ಕೇಳಲ್ಲ ಎಂದರು.
ಬೆಂಗಳೂರು: ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗಲೇ ಅದು ರಾಜಕೀಯಪ್ರೇರಿತ ಅಂತ ತಾನು ಹೇಳಿದ್ದೆ, ನಗರಾಭಿವೃದ್ಧಿ ಇಲಾಖೆಯು ಜಮೀನುಗಳನ್ನು ಸ್ವಾಧೀನ ಮಾಡಿಕೊಂಡಾಗ ಭೂಮಿ ಕಳೆದುಕೊಂಡವರು ಬದಲೀ ಜಾಗವನ್ನು ಕೇಳುತ್ತಾರೆ. ಸಿದ್ದರಾಮಯ್ಯ ಪತ್ನಿ ಸಹಿತ ಕೇಳಿದ್ದಾರೆ, ಅದರಲ್ಲಿ ತಪ್ಪೇನು ಬಂತು ಎಂದು ಡಿಕೆ ಶಿವಕುಮಾರ್ ಹೇಳಿದರು. ಅವರಿಗೆ ಸಿಕ್ಕ ನಿವೇಶನಗಳು ವಿವಾದಕ್ಕೆ ಸಿಲುಕಿದಾಗ ಅವುಗಳನ್ನು ಮುಡಾಗೆ ವಾಪಸ್ಸು ಕೊಟ್ಟು ದೊಡ್ಡತನ ಪ್ರದರ್ಶಿಸಿದ್ದಾರೆ, ಲೋಕಾಯುಕ್ತ ಒಂದು ಸ್ವಾಯತ್ತ ಸಂಸ್ಥೆ ಎಂದು ಹೈಕೋರ್ಟ್ ಹೇಳಿದೆ ಅಂತ ಉಪ ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಣ್ಣ ಆಡಿರುವ ಮಾತಿಗೆ ಪ್ರತಿಕ್ರಿಯೆ ಕೇಳಿದಾಗ ಡಿಕೆ ಶಿವಕುಮಾರ್, ಕೇರಳ ಹೋಗ್ತಿದ್ದೀನಿ, ಆಮೇಲೆ ಮಾತಾಡ್ತೀನಿ ಎಂದರು!

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ

ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ

ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
