ಕಡುಭ್ರಷ್ಟ ಮತ್ತು ಕರುಣೆಯಿಲ್ಲದ ಸರ್ಕಾರ ಸಮಯವನ್ನೆಲ್ಲ ಸಮಾವೇಶಗಳಿಗೆ ಮೀಸಲಿಟ್ಟಿದೆ: ಸಿಟಿ ರವಿ

ಕಡುಭ್ರಷ್ಟ ಮತ್ತು ಕರುಣೆಯಿಲ್ಲದ ಸರ್ಕಾರ ಸಮಯವನ್ನೆಲ್ಲ ಸಮಾವೇಶಗಳಿಗೆ ಮೀಸಲಿಟ್ಟಿದೆ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2024 | 11:23 AM

ವಕ್ಫ್ ಕಾಯ್ದೆ ಬಗ್ಗೆ ಮಾತಾಡಿದ ರವಿ, ದೇಶದ ನ್ಯಾಯಾಂಗಕ್ಕೂ ಮೀರಿದ ಪರಮಾಧಿಕಾರವನ್ನು ಹಿಂದಿನ ಕಾಂಗ್ರೆಸ್ ಸರ್ಕಾರಗಳು ವಕ್ಫ್ ಮಂಡಳಿಗೆ ನೀಡಿವೆ, ಅದರ ನಿರ್ಣಯಗಳನ್ನು ಭಾರತದ ಯಾವುದೇ ಕೋರ್ಟ್ ಪ್ರಶ್ನಿಸುವಂತಿಲ್ಲ! ಪ್ರಾಯಶಃ ಮೊಹಮ್ಮದ್ ಜಿನ್ನಾ ಭಾರತದಲ್ಲಿ ವಾಸವಾಗಿದ್ದರೂ ಇದನ್ನು ಒಪ್ಪುತ್ತಿರಲಿಲ್ಲ, ಕೇವಲ ಮುಸಲ್ಮಾನರ ವೋಟು ಪಡೆಯಲು ಕಾಂಗ್ರೆಸ್ ಸೃಷ್ಟಿಸಿದ ಸನ್ನಿವೇಶವಿದು ಎಂದು ಹೇಳಿದರು.

ಬೆಳಗಾವಿ: ವಿಧಾನಮಂಡಲದ ಅಧಿವೇಶನಕ್ಕೆ ಮೊದಲು ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಎಂಎಲ್​ಸಿ ಸಿಟಿ ರವಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕಡು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದರೆ, ಯಾವಮಟ್ಟಿಗೆ ಲಂಚಗುಳಿತನ ಹಾಸುಹೊಕ್ಕಿದೆ ಅನ್ನೋದು ಗೊತ್ತಾಗುತ್ತದೆ, ಈ ಸರ್ಕಾರಕ್ಕೆ ಕರಣೆಯೂ ಇಲ್ಲ, ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರು ದಾರುಣವಾಗಿ ಸಾಯುತ್ತಿದ್ದರೆ ಸಿದ್ದರಾಮಯ್ಯ ಸರ್ಕಾರ ಸಮಾವೇಶಗಳನ್ನು ಮಾಡಿಕೊಂಡಿದೆ ಎಂದು ರವಿ ಕಿಡಿಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ