ಜಗಮಗಿಸೋ ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಅರಮನೆಯಂಗಳದಲ್ಲಿ ಕರ್ನಾಟಕ ಪೊಲೀಸರಿಂದ ವಾದ್ಯಗೋಷ್ಠಿ ಹಾಗೂ ಇಂಗ್ಲೀಷ್ ಬ್ಯಾಂಡ್ ಗಮನ ಸೆಳೆಯುತ್ತಿದೆ. 156 ವರ್ಷದ ಇತಿಹಾಸ ಹೊಂದಿರುವ ಪೊಲೀಸ್ ಬ್ಯಾಂಡ್ನ್ನು ರಾಜವಂಶಸ್ಥರು ಸೇರಿದಂತೆ ಸಚಿವರಾದ ಸತೀಶ್ ಜಾರಕಿಹೊಳೆ, ಜಿ. ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್ ಪೊಲೀಸ್ ಬ್ಯಾಂಡ್ ಸಂಗೀತ ವೀಕ್ಷಿಸಿದರು.
ಮೈಸೂರು, ಅ.08: ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಅರಮನೆಯಂಗಳದಲ್ಲಿ ಕರ್ನಾಟಕ ಪೊಲೀಸರಿಂದ ವಾದ್ಯಗೋಷ್ಠಿ ಹಾಗೂ ಇಂಗ್ಲೀಷ್ ಬ್ಯಾಂಡ್ ಗಮನ ಸೆಳೆಯುತ್ತಿದೆ. ಜಂಬೂ ಸವಾರಿ ಮೆರವಣಿಗೆ ಜತೆ ಗಮನ ಸೆಳೆಯುವ ಪೊಲೀಸ್ ಬ್ಯಾಂಡ್ ಸಂಸ್ಕೃತಿ ಮೈಸೂರಿನಲ್ಲಿ 1868ರಲ್ಲಿ ಆರಂಭವಾಯಿತು. 156 ವರ್ಷದ ಇತಿಹಾಸ ಹೊಂದಿರುವ ಪೊಲೀಸ್ ಬ್ಯಾಂಡ್, ಇಂದು ಪೊಲೀಸ್ ಬ್ಯಾಂಡ್ ತಂಡದಿಂದ ಸಂಗೀತ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜವಂಶಸ್ಥರು ಸೇರಿದಂತೆ ಸಚಿವರಾದ ಸತೀಶ್ ಜಾರಕಿಹೊಳೆ, ಜಿ. ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್ ಪೊಲೀಸ್ ಬ್ಯಾಂಡ್ ಸಂಗೀತ ವೀಕ್ಷಿಸಿದರು. 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಾದ್ಯ ವೃಂದದ ಮೂಲಕ ಇಂಗ್ಲಿಷ್ ಬ್ಯಾಂಡ್, ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ ಗೀತೆ ಹಾಡುವ ಮುಖಾಂತರ ನಾಡಿನ ಕಲೆ ಸಂಸ್ಕೃತಿ, ಬಿಂಬಿಸಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos