ತಾಯಿಯಿಂದ ಬೇರ್ಪಟ್ಟ ಕರಡಿ ಮರಿ ರಕ್ಷಣೆ ಮಾಡಿದ ಗ್ರಾಮಸ್ಥರು
[lazy-load-videos-and-sticky-control id=”qINzaDG41us”] ಚಿತ್ರದುರ್ಗ: ತಾಯಿಂದ ಬೇರ್ಪಟ್ಟಿದ್ದ ಕರಡಿ ಮರಿ, ಮರದಿಂದ ಇಳಿಯಲಾಗದೆ ಪರಿತಪಿಸುತ್ತಿದದ್ದನ್ನು ಕಂಡ ಸ್ಥಳೀಯರು, ಕರಡಿ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಚಿತ್ರದುರ್ಗದ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಾವಿ ಗ್ರಾಮದ ಅರಣ್ಯದಲ್ಲಿ ಈ ಘಟನೆ ನಡೆದಿದೆ. ತಾಯಿಯಿಂದ ಬೇರ್ಪಟ್ಟಿದ್ದ ಕರಡಿ ಮರಿಯೊಂದು, ಮರದಿಂದ ಇಳಿಯಲು ಕಷ್ಟಪಡುತ್ತಿತ್ತು. ಇದನ್ನು ಕಂಡ ಬಾಂಡ್ರಾವಿ ಗ್ರಾಮದ ಗ್ರಾಮಸ್ಥರು, ಕೂಡಲೇ ವಿಚಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ತುಂಬಾ ಸಮಯ ಕಾದ ಬಳಿಕವೂ ಅರಣ್ಯ ಇಲಾಖೆ […]

[lazy-load-videos-and-sticky-control id=”qINzaDG41us”]
ಚಿತ್ರದುರ್ಗ: ತಾಯಿಂದ ಬೇರ್ಪಟ್ಟಿದ್ದ ಕರಡಿ ಮರಿ, ಮರದಿಂದ ಇಳಿಯಲಾಗದೆ ಪರಿತಪಿಸುತ್ತಿದದ್ದನ್ನು ಕಂಡ ಸ್ಥಳೀಯರು, ಕರಡಿ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಚಿತ್ರದುರ್ಗದ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಾವಿ ಗ್ರಾಮದ ಅರಣ್ಯದಲ್ಲಿ ಈ ಘಟನೆ ನಡೆದಿದೆ. ತಾಯಿಯಿಂದ ಬೇರ್ಪಟ್ಟಿದ್ದ ಕರಡಿ ಮರಿಯೊಂದು, ಮರದಿಂದ ಇಳಿಯಲು ಕಷ್ಟಪಡುತ್ತಿತ್ತು. ಇದನ್ನು ಕಂಡ ಬಾಂಡ್ರಾವಿ ಗ್ರಾಮದ ಗ್ರಾಮಸ್ಥರು, ಕೂಡಲೇ ವಿಚಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದರೆ ತುಂಬಾ ಸಮಯ ಕಾದ ಬಳಿಕವೂ ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಕಾರಣ, ಗ್ರಾಮಸ್ಥರೇ ಕರಡಿ ಮರಿಯನ್ನು ಮರದಿಂದ ಕೆಳಗೆ ಇಳಿಸಿದ್ದಾರೆ. ಕೆಲಹೊತ್ತು ಕರಡಿ ಮರಿಯನ್ನು ಆರೈಕೆ ಮಾಡಿ, ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.
Published On - 3:02 pm, Mon, 24 August 20