ಬೈಕ್​ನಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಖದೀಮ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಬೈಕ್​ನಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಖದೀಮ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 24, 2024 | 2:58 PM

ಬೈಕ್​ನಲ್ಲಿದ್ದ 1.50 ಲಕ್ಷ ಹಣವನ್ನು ಖದೀಮನೊಬ್ಬ ಎಗರಿಸಿದ ಘಟನೆ ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ. ಬೈಕ್ ನಿಲ್ಲಿಸಿ ಅಂಗಡಿಗೆ ಹೋದಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಇನ್ನು ಆರೋಪಿ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯನಗರ, ಜ.24: ಬೈಕ್​ನಲ್ಲಿದ್ದ 1.50 ಲಕ್ಷ ಹಣವನ್ನು ಖದೀಮನೊಬ್ಬ ಎಗರಿಸಿದ ಘಟನೆ ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ. ರೈತ ಮಹಾಂತೇಶ್‌ ಗೌಡ ಎಂಬುವವರು ಟ್ರ್ಯಾಕ್ಟರ್ ಸಾಲ ಕಟ್ಟಲು ಬ್ಯಾಂಕ್​ನಿಂದ ಹಣ ತರುವುದನ್ನು ಗಮನಿಸಿದ ಖದೀಮ, ಬ್ಯಾಂಕ್​ನಿಂದ ಮಹಾಂತೇಶ್‌ ಗೌಡನನ್ನ ಹಿಂಬಾಲಿಸಿದ್ದಾನೆ. ಈ ವೇಳೆ ಬೈಕ್ ನಿಲ್ಲಿಸಿ ಅಂಗಡಿಗೆ ಹೋದಾಗ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಇನ್ನು ಆರೋಪಿ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಆಟೋಗೆ ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣ

ಬಾಗಲಕೋಟೆ: ತಾಲೂಕಿನ ‌ತುಳಸಿಗೇರಿ ಗ್ರಾಮದಲ್ಲಿ ಆಟೋಗೆ ಕಾರು ಡಿಕ್ಕಿಯಾಗಿ ಒಂದು ವರ್ಷದ ಮಗು ಹಾಗೂ ಸರಿಸುಮಾರು 55 ವರ್ಷದ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ಕುರಿತು ಕಲಾದಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ಇದನ್ನೂ ಓದಿ:Viral Video: ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಖತರ್ನಾಕ್ ಕಳ್ಳನಿಗೆ ಪ್ರಯಾಣಿಕರು ನೀಡಿದ ಶಿಕ್ಷೆ ಏನು ಗೊತ್ತಾ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ