ಬೆಂಗಳೂರಲ್ಲಿ ಪಾರ್ಕ್ ಮಾಡಿದ್ದ ಕಾರಿನ ನಾಲ್ಕೂ ಚಕ್ರಗಳನ್ನು ಕಳುವು ಮಾಡುವ ಅನಿವಾರ್ಯತೆ ಕಳ್ಳರಿಗೇನಿತ್ತೋ?
ಒಂದು ಪಕ್ಷ ಕಳ್ಳರೇ ಜ್ಯಾಕ್ ತಂದಿದ್ದರೆ ಅವರು ಕಾರು ಕಳ್ಳರಲ್ಲ, ಪಾರ್ಕ್ ಮಾಡಿರುವ ವಾಹನಗಳ ಟೈರ್ ಗಳನ್ನು ಕಳ್ಳತನ ಮಾಡುವುದು ಉದ್ದೇಶ ಅವರಿಗಿರುತ್ತದೆ. ಚಕ್ರಗಳು ಕಳುವಾದ ಕಾರಿನ ಮಾಲೀಕ ಮಾತಾಡುವ ಶೈಲಿಯಿಂದ ಅವರು ಉತ್ತರ ಕರ್ನಾಟಕದವರಿರಬಹುದು ಅನಿಸುತ್ತದೆ. ಅವರು ಹೇಳುವ ಪ್ರಕಾರ ಚಕ್ರಗಳನ್ನು ಕದಿಯಲು ಕಳ್ಳರು ಇನ್ನೋವಾ ಕಾರಲ್ಲಿ ಬಂದಿದ್ದರಂತೆ! ಇವರೆಂಥ ಕಳ್ಳರು ಸ್ವಾಮಿ?
ಬೆಂಗಳೂರು, ಮಾರ್ಚ್ 17: ಕಳ್ಳತನ ಮಾಡಲು ಹೊರಟವರು ಬರಿಗೈಲಿ ವಾಪಸ್ಸು ಹೋಗೋದಿಲ್ಲ ಎಂಬ ಮಾತಿದೆ, ಅಂದರೆ ತಾವು ಅಂದುಕೊಂಡಿದ್ದ ಮನೆ ಅಥವಾ ಅಂಗಡಿ ಕಳ್ಳತನ ಮಾಡಲು ಪ್ರತಿಕೂಲ ಸನ್ನಿವೇಶ ಎದುರಾದರೆ, ಅದರ ಬದಲಿಗೆ ಬೇರೆ ಏನಾದರೂ ಕದ್ದು ವಾಪಸ್ಸಾಗುತ್ತಾರಂತೆ. ಇಲ್ನೋಡಿ, ನಗರದ ಗಾಂಧಿನಗರದ ಹೋಟೆಲೊಂದರ ಮುಂದೆ ಪಾರ್ಕ್ ಮಾಡಿದ್ದ ಕಾರನ್ನು ಖದೀಮರು ಬೆಳಗಿನ ಜಾವ ಸುಮಾರು 3 ಗಂಟೆಗೆ ಕದ್ದೊಯ್ಯುವ ಪ್ರಯತ್ನ ಮಾಡಿದ್ದಾರೆ. ಅದರೆ ಪ್ರಾಯಶಃ ಡೋರ್ ಓಪನ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗೇ ಕಾರಿನ 4 ವ್ಹೀಲ್ ಗಳನ್ನು (wheels) ಬಿಚ್ಚಿ ಒಯ್ದಿದ್ದಾರೆ. ಜ್ಯಾಕ್ ಕಾರಿನ ಡಿಕ್ಕಿಯಲ್ಲಿತ್ತೋ ಅಥವಾ ಜೊತೆಗೆ ತಂದಿದ್ದರೋ ಗೊತ್ತಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ