ಸುದೀಪ್ ಬಿಗ್ ಬಾಸ್ ತೊರೆಯಲು ಅಸಲಿ ಕಾರಣ ತಿಳಿಸಿದ ಸ್ನೇಹಿತ ರಾಜೀವ್
ಬಿಗ್ ಬಾಸ್ ಮಾಜಿ ಸ್ಪರ್ಧಿ ರಾಜೀವ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಜೊತೆ ಆಪ್ತವಾಗಿರುವ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಬಳಿಕ ಸುದೀಪ್ ಅವರು ನಿರೂಪಣೆ ಮಾಡಲ್ಲ ಎಂದಿದ್ದು ಯಾಕೆ ಎಂಬ ಬಗ್ಗೆ ರಾಜೀವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಊಹಿಸಿಕೊಳ್ಳುವುದು ಕಷ್ಟ. ಹಾಗಿದ್ದರೂ ಕೂಡ ಅವರು ಬಿಗ್ ಬಾಸ್ ನಿರೂಪಣೆ ಇನ್ಮುಂದೆ ಮಾಡಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಅದಕ್ಕೆ ಕಾರಣ ಏನಿರಬಹುದು ಎಂಬ ಬಗ್ಗೆ ಸುದೀಪ್ ಅವರ ಆಪ್ತ ರಾಜೀವ್ ಮಾತನಾಡಿದ್ದಾರೆ. ‘ಶೋ ಒಪ್ಪಿಕೊಂಡ ಮೇಲೆ ಎಲ್ಲೇ ಇದ್ದರೂ ಓಡಿಬರಬೇಕಾಗುತ್ತದೆ. ಅದರಿಂದ ಸುಸ್ತಾಗುತ್ತೆ ಅಂತ ಸುದೀಪ್ ಸರ್ ಹೇಳಿದ್ದಾರೆ. ಬ್ರೇಕ್ ಬೇಕು ಅನುಸುತ್ತೆ ಎಂದಿದ್ದಾರೆ’ ಎಂದು ರಾಜೀವ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos