ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ; ಈ ರಾಣಿ ಈಗ ಸೋಷಿಯಲ್ ಮೀಡಿಯಾ ಸ್ಟಾರ್
ಉತ್ತರ ಪ್ರದೇಶದ ರಾಯ್ಬರೇಲಿ ಬಳಿಯ ಖಾಗಿಪುರ್ ಸಾದ್ವಾ ಎಂಬ ಸಣ್ಣ ಹಳ್ಳಿಯಲ್ಲಿ ರಾಣಿ ಎಂಬ ವಿಶಿಷ್ಟ ಕೋತಿ ವಾಸಿಸುತ್ತಿದೆ. ಮಂಗವಾಗಿ ಹುಟ್ಟಿದ್ದರೂ ತನ್ನ ಮಾನವೀಯ ಗುಣ ಮತ್ತು ಸಹಾಯ ಮಾಡುವ ಗುಣದಿಂದಾಗಿ ಇಡೀ ಹಳ್ಳಿಯ ಅಚ್ಚುಮೆಚ್ಚಿನವಳಾಗಿದ್ದಾಳೆ. ರಾಣಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದೆ. ಮನೆಯ ಹೆಂಗಸರು ಅಡುಗೆ ಮಾಡುವಾಗಲೆಲ್ಲ ಅವರಿಗೆ ಸಹಾಯ ಮಾಡಲು ರಾಣಿ ಉತ್ಸಾಹದಿಂದ ಹೋಗುತ್ತಾಳೆ.
ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಚಪಾತಿಗಳನ್ನು ಲಟ್ಟಿಸುವ ಮತ್ತು ಪಾತ್ರೆಗಳನ್ನು ತೊಳೆಯುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ. ಈ ಕೋತಿ ಈಗ ಸಾಮಾಜಿಕ ಮಾಧ್ಯಮದ ಸ್ಟಾರ್ ಆಗಿಬಿಟ್ಟಿದೆ. ರಾಯ್ಬರೇಲಿ ಜಿಲ್ಲೆಯಲ್ಲಿನ ರಾಣಿ ಎಂಬ ಈ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕೋತಿ ಚಪಾತಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಎಲ್ಲ ಮನೆಕೆಲಸಗಳನ್ನು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದಿನನಿತ್ಯದ ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ರಾಣಿ ಸುಮಾರು 8 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಆಗಮಿಸಿದ್ದು, ಅಂದಿನಿಂದ ಅಶೋಕ್ ಮತ್ತು ಆತನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಪಾತ್ರೆಗಳನ್ನು ತೊಳೆಯುವುದು, ಚಪಾತಿಗಳನ್ನು ಲಟ್ಟಿಸುವುದು ಮತ್ತು ಮಸಾಲೆಗಳನ್ನು ರುಬ್ಬುವುದು ಮುಂತಾದ ಕೆಲಸಗಳಲ್ಲಿ ರಾಣಿ ಆ ಮನೆಯ ಒಡತಿಗೆ ಸಹಾಯ ಮಾಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ