ಧರೆಗುರುಳಿದ ಸಾವಿರಾರು ವರ್ಷಗಳ ಐತಿಹಾಸಿಕ ದೊಡ್ಡ ಹುಣಸೆ ಮರ: ಮತ್ತೆ ನೆಡಲು ಅಧಿಕಾರಿಗಳು ಚಿಂತನೆ

ಧರೆಗುರುಳಿದ ಸಾವಿರಾರು ವರ್ಷಗಳ ಐತಿಹಾಸಿಕ ದೊಡ್ಡ ಹುಣಸೆ ಮರ: ಮತ್ತೆ ನೆಡಲು ಅಧಿಕಾರಿಗಳು ಚಿಂತನೆ

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 07, 2023 | 8:39 PM

ಶ್ರೀ ಮಠದಲ್ಲಿ ಒಟ್ಟು ಮೂರು ದೊಡ್ಡ ಹುಣಸೆ ಮರಗಳಿವೆ. ಆ ಪೈಕಿ ಇಂದು ಒಂದು ಮರ ಧರೆಗೆ ಉರುಳಿದೆ. ಸ್ಥಳಕ್ಕೆ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮರವನ್ನು ಮತ್ತೆ ಯಥಾವತ್ತಾಗಿ ನೆಡಲು ಚಿಂತನೆ ನಡೆಸಿದ್ದಾರೆ.

ಹಾವೇರಿ: ಸವಣೂರು ಪಟ್ಟಣದ ಶ್ರೀದೊಡ್ಡಹುಣಸೆ ಕಲ್ಮಠದ ಆವರಣದಲ್ಲಿದ್ದ ಐತಿಹಾಸಿ ದೊಡ್ಡ ಹುಣಸೆ ಮರ (tamarind tree) ಧರಾಶಾಹಿ ಆಗಿದೆ. ನೂರಾರು ವರ್ಷಗಳ ಹಿಂದೆ ಘೋರಖನಾಥ ತಪಸ್ವಿಗಳು 3 ಗಿಡಗಳನ್ನು ನೆಟ್ಟಿದ್ದರು ಎಂಬ ಮಾಹಿತಿ ಇದೆ. ಶ್ರೀ ಮಠದಲ್ಲಿ ಒಟ್ಟು ಮೂರು ದೊಡ್ಡ ಹುಣಸೆ ಮರಗಳಿವೆ. ಆ ಪೈಕಿ ಇಂದು ಒಂದು ಮರ ಧರೆಗೆ ಉರುಳಿದೆ. ಸ್ಥಳಕ್ಕೆ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮರವನ್ನು ಮತ್ತೆ ಯಥಾವತ್ತಾಗಿ ನೆಡಲು ಚಿಂತನೆ ನಡೆಸಿದ್ದಾರೆ.

ನಾಳೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರು ಭೇಟಿ ನೀಡಲಿದ್ದಾರೆ. ದೊಡ್ಡ ಹುಣಸೆ ಮರ ಕೇವಲ ಮರ ಆಗದೆ ನಮ್ಮ‌ಮಠದ ಅವಿಭಾಜ್ಯ ಅಂಗವಾಗಿತ್ತು. ಅನೇಕ ಭಕ್ತರ ಪ್ರತೀಕ ವಾಗಿದ್ದ ಈ ಮರ ಇಂದು ಧರೆಗೆ ಉರುಳಿದ್ದ ಮಠಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮರವನ್ನು ಮತ್ತೆ ನೆಡಲು ಪ್ರಯತ್ನಿಸುತ್ತಿದ್ದೆವೆ ಎಂದು ಸವಣೂರು ದೊಡ್ಡಹುಣಸೆ ಕಲ್ಮಠದ ಚೆನ್ನ ಬಸವ ಸ್ವಾಮೀಜಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 07, 2023 08:37 PM