ಬಂಡೆಗೆ ಡಿಕ್ಕಿ ಹೊಡೆದ ನಾಡದೋಣಿ ಮುಳುಗಡೆ.. ಮೂವರು ಮೀನುಗಾರರು ನಾಪತ್ತೆ
[lazy-load-videos-and-sticky-control id=”Um69bEmrXHI”] ಉಡುಪಿ: ಮೀನು ಹಿಡಿದು ವಾಪಸಾಗುತ್ತಿದ್ದ ವೇಳೆ ನಾಡದೋಣಿಯೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಸಮೀಪದ ಕೊಡೆರಿ ಬಳಿ ಹತ್ತು ಜನರ ತಂಡ ಮೀನುಗಾರಿಕೆಂದು ತೆರಳಿತ್ತು. ಮೀನು ಹಿಡಿದು ವಾಪಸಾಗುತ್ತಿದ್ದ ವೇಳೆ ಅಲೆಗಳ ರಭಸ ಹೆಚ್ಚಾಗಿದ್ದರಿಂದ ಸಾಗರಶ್ರೀ ಎಂಬ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ದೋಣಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 10 ಜನ ಮೀನುಗಾರರ ಪೈಕಿ ಮೂವರು ನಾಪತ್ತೆಯಾಗಿದ್ದಾರೆ. ಕುಂದಾಪುರ […]
[lazy-load-videos-and-sticky-control id=”Um69bEmrXHI”]
ಉಡುಪಿ: ಮೀನು ಹಿಡಿದು ವಾಪಸಾಗುತ್ತಿದ್ದ ವೇಳೆ ನಾಡದೋಣಿಯೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಸಮೀಪದ ಕೊಡೆರಿ ಬಳಿ ಹತ್ತು ಜನರ ತಂಡ ಮೀನುಗಾರಿಕೆಂದು ತೆರಳಿತ್ತು. ಮೀನು ಹಿಡಿದು ವಾಪಸಾಗುತ್ತಿದ್ದ ವೇಳೆ ಅಲೆಗಳ ರಭಸ ಹೆಚ್ಚಾಗಿದ್ದರಿಂದ ಸಾಗರಶ್ರೀ ಎಂಬ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮವಾಗಿ ದೋಣಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, 10 ಜನ ಮೀನುಗಾರರ ಪೈಕಿ ಮೂವರು ನಾಪತ್ತೆಯಾಗಿದ್ದಾರೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ನಾಪತ್ತೆಯಾಗಿರುವ ಮೀನುಗಾರರಿಗೋಸ್ಕರ ಹುಡುಕಾಟ ಶುರುವಾಗಿದೆ.
Published On - 5:54 pm, Sun, 16 August 20