ನೂತನ ಕಾಂಗ್ರೆಸ್ MLC ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಬೃಹತ್ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ
ನೂತನ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ಕಳಚಿ ನೆಲಕ್ಕೆ ಬಿದ್ದಿದೆ. ಸಿಂಧನೂರು ನಗರದ ಕೋರ್ಟ್ ಮುಂಭಾಗದಲ್ಲಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ದಿಢೀರ್ ಬಿದ್ದಿದ್ದ, ಪರಿಣಾಯಮ ಮೂವರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರು, (ಜುಲೈ 22): ಕರ್ನಾಟಕ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ಬಸನಗೌಡ ಬಾದರ್ಲಿ ಅವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಸಿಂಧನೂರು ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ನಿನ್ನೆ(ಜುಲೈ 21) ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ನಗರದ ತುಂಬೆಲ್ಲಾ ಬ್ಯಾನರ್ ಫ್ಲೆಕ್ಸ್ ಹಾಕಿ ಸ್ವಾಗತ ಕೋರಿದ್ದಾರೆ. ಅಲ್ಲದೇ ಡಿಜೆ ಮೆರವಣಿಗೆ ಮೂಲಕ ಬಸನಗೌದ ಬಾದರ್ಲಿ ಅವರನ್ನು ಬರಮಾಡಿಕೊಂಡಿದ್ದಾರೆ. ಆದ್ರೆ, ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ ಕೋರ್ಟ್ ಸರ್ಕಲ್ ಬಳಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ಇಂದು (ಜುಲೈ 22) ಬೆಳಗ್ಗೆ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ. ವೀರಾಪುರ ಯಮನಪ್ಪ, ಅಂಬಮ್ಮ, ಬೂದಿಹಾಳದ ಚಿಟ್ಟಿಬಾಬು ಎನ್ನುವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 22, 2024 05:39 PM