‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ಪ್ರಭಾಕರ್ ಮಾತು ನೆನೆದ ವಿನೋದ್
ಪ್ರಭಾಕರ್ ಅವರು ನೂರಾರು ಸಿನಿಮಾಗಳನ್ನು ಮಾಡಿದವರು. ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಅವರು ಹೆಸರು ಮಾಡಿದ್ದರು. ಪ್ರಭಾಕರ್ ಇಷ್ಟೆಲ್ಲ ಹೆಸರು ಮಾಡಿದರೂ ಅವರಿಗೆ ಚಿತ್ರರಂಗ ಹಾಗೂ ಸಿನಿಮಾ ಅರ್ಥವಾಗಿಲ್ಲವಂತೆ. ಈ ಬಗ್ಗೆ ಅವರು ವಿನೋದ್ ಬಳಿ ಹೇಳಿದ್ದರಂತೆ. ಆ ವಿಷಯವನ್ನು ವಿನೋದ್ ನೆನಪಿಸಿಕೊಂಡಿದ್ದಾರೆ.
ಪ್ರಭಾಕರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಪೊಲೀಸ್ ಆಗಿ, ಹೀರೋ ಆಗಿ, ವಿಲನ್ ಆಗಿ ಮಿಂಚಿದ್ದರು. ಅವರು ಹೇಳಿದ ಒಂದು ಮಾತನ್ನು ವಿನೋದ್ ಪ್ರಭಾಕರ್ ನೆನಪಿಸಿಕೊಂಡಿದ್ದಾರೆ.‘ಬಲರಾಮನ ದಿನಗಳು’ ಸಿನಿಮಾ ಟೀಸರ್ ಲಾಂಚ್ ವೇಳೆ ಮಾತನಾಡಿದ ಪ್ರಭಾಕರ್ ಅವರು, ‘ನಾನು ಇಷ್ಟೆಲ್ಲ ಸಿನಿಮಾ ಮಾಡಿದರೂ ನನಗೆ ಸಿನಿಮಾ ಏನು ಅನ್ನೋದು ಗೊತ್ತಾಗಿಲ್ಲ ಮಗನೆ ಎಂದು ಪ್ರಭಾಕರ್ ಹೇಳುತ್ತಿದ್ದರು’ ಎಂದು ವಿನೋದ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ

