Viral Video: ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ

Edited By:

Updated on: Nov 27, 2024 | 3:52 PM

ತಾಯಿಯೊಂದಿಗಿದ್ದ ಮರಿ ಆನೆಯನ್ನು ತಿನ್ನಲು ಹೊಂಚು ಹಾಕಿದ ಹುಲಿ ಕೊನೆಗೆ ತಾನೇ ಹೆದರಿ ಓಡಿಹೋಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗಿದ್ದ ಮರಿ ಆನೆಯನ್ನು ತಿನ್ನಲು ಹೊಂಚು ಹಾಕಿ ಕುಳಿತಿದ್ದ ಹುಲಿಯನ್ನು ತಾಯಿ ಆನೆ ಓಡಿಸಿದೆ. ಸಫಾರಿಗೆ ಬಂದಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ತಾಯಾನೆ ಹುಲಿಯನ್ನು ಓಡಿಸಿದ ದೃಶ್ಯ ಸೆರೆಯಾಗಿದೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ಸಫಾರಿ ಮಾಡುವಾಗ ಪ್ರವಾಸಿಗರ ಕಣ್ಣಿಗೆ ಅಚ್ಚರಿಯ ದೃಶ್ಯವೊಂದು ಬಿದ್ದಿದೆ. ಈ ದೃಶ್ಯವನ್ನು ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ತಾಯಿಯೊಂದಿಗೆ ತಿರುಗಾಡುತ್ತಿದ್ದ ಆನೆ ಮರಿಗೆ ಹೊಂಚು ಹಾಕಿ ಕುಳಿತಿದ್ದ ಹುಲಿರಾಯನಿಗೆ ತಾಯಾನೆ ಗ್ರಹಚಾರ ಬಿಡಿಸಿದೆ. ಬಂಡೀಪುರದಲ್ಲಿ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಹುಲಿ ಬಳಿಕ ತಾಯಾನೆಗೆ ಹೆದರಿ ಎಸ್ಕೇಪ್ ಆಗಿದೆ. ತಾಯಿಯೊಂದಿಗೆ ಇದ್ದ ಮರಿ ಆನೆಯನ್ನು ತಿನ್ನಲು ಕಾದು ಕುಳಿತಿದ್ದ ಹುಲಿಯ ಹೊಂಚು ಗಮನಿಸಿ ತಾಯಿ ಆನೆ ಆ ಹುಲಿಯನ್ನು ಓಡಿಸಿದೆ. ಆನೆ ಹುಲಿ ಮೇಲೆ ಎಗರಿ ಓಡಿಸಿದ ವೀಡಿಯೋ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ