ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ಅಂತಿಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

Updated on: Apr 23, 2025 | 8:39 PM

ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಬೆಂಗಳೂರುನಿಂದ ಶಿವಮೊಗ್ಗ ತರಲು ಮಂಜುನಾಥ್ ಪತ್ನಿ ಪಲ್ಲವಿ ಅವರ ಸಹೋದರ ಪ್ರದೀಪ್ ಮತ್ತು ಸಹೋದರಿ ವಿನುತಾ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದಾರೆ. ನಮ್ಮ ಶಿವಮೊಗ್ಗ ವರದಿಗಾರ ನೀಡುವ ಮಾಹಿತಿ ಪ್ರಕಾರ ಪಾರ್ಥೀವ ಶರೀರ ಬೆಳಗಿನ ಜಾವ ಮೂರು ಗಂಟೆಗೆ ಆಗಮಿಸಲಿದೆ. ಮಗನೊಂದಿಗೆ ಪಲ್ಲವಿ ಅವರು ಪ್ರದೀಪ್ ಮತ್ತು ವಿನುತಾ ಜೊತೆ ಕಾರಲ್ಲೇ ಶಿವಮೊಗ್ಗ ಬರಬಹುದು.

ಶಿವಮೊಗ್ಗ, ಏಪ್ರಿಲ್ 23: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ (terror attack) ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ವಿಮಾನದ ಮೂಲಕ ನಾಳೆ ಬೆಳಗಿನ ಜಾವ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಅಲ್ಲಿಂದ ಅವರ ದೇಹವನ್ನು ಶಿವಮೊಗ್ಗಗೆ ಕಾರು ಅಥವಾ ಅಂಬ್ಯುಲೆನ್ಸ್ ನಲ್ಲಿ ತರಬಹುದು. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಜುನಾಥ್ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ:  ಪಹಲ್ಗಾಮ್ ಉಗ್ರರ ದಾಳಿ: ಮೃತ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ