ಯತೀಂದ್ರ ಸಿದ್ದರಾಮಯ್ಯ ನಮ್ಮ ವರಿಷ್ಠರ ವಿರುದ್ಧ ಕಾಮೆಂಟ್ ಮಾಡೋದು ಬಿಟ್ಟು ತಮ್ಮ ತಂದೆಯ ಬಗ್ಗೆ ಮಾತಾಡಲಿ: ಡಿವಿ ಸದಾನಂದಗೌಡ

|

Updated on: Mar 29, 2024 | 12:59 PM

ಬಿಜೆಪಿ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಮಾಡಿದ ಸಾಧನೆಗಳೇ ಶ್ರೀರಕ್ಷೆ. ಆ ಸಾಧನೆಗಳ ಹಿನ್ನೆಲೆಯಲ್ಲೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸದಾನಂದ ಗೌಡ ಹೇಳಿದರು.

ಬೆಂಗಳೂರು: ನಗರದ ಹೋಟೆಲೊಂದರಲ್ಲಿ ಅಯೋಜಿಸಿದ್ದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಅಗಮಿಸಿದ ಹಿರಿಯ ಬಿಜೆಪಿ ನಾಯಕ ಡಿವಿ ಸದಾನಂದಗೌಡ (DV Sadananda Gowda) ಅವರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಯತೀಂದ್ರ ಸಿದ್ದರಾಮಯ್ಯರನ್ನು (Yathindra Siddaramaiah) ತರಾಟೆಗೆ ತೆಗೆದುಕೊಂಡರು. ಬೇರೆಯವರ ಬಗ್ಗೆ ಹಗುರವಾಗಿ ಮಾತಾಡುವುದು ಮತ್ತು ಬಯ್ಯುವುದನ್ನೇ ಕೆಲವರು ರಾಜಕೀಯದಲ್ಲಿ ದೊಡ್ಡತನ ಅಂದುಕೊಳ್ಳುತ್ತಾರೆ. ಅಂಥವರ ಪಾಲಿಗೆ ಯತೀಂದ್ರ ಸಿದ್ದರಾಯ್ಯ ಸೇರಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಯತೀಂದ್ರ ಒಬ್ಬ ಯುವ ರಾಜಕಾರಣಿಯಾಗಿದ್ದಾರೆ ಮತ್ತು ರಾಜಕೀಯದಲ್ಲಿ ಬೆಳೆಯಬೇಕಿದೆ. ತಮ್ಮ ತಂದೆ ಸಿದ್ದರಾಮಯ್ಯ 14 ಬಜೆಟ್ ಮಂಡಿಸಿರುವ ಬಗ್ಗೆ ಅವರು ಹೇಳಿಕೊಳ್ಳುತ್ತಿರುತ್ತಾರೆ, ಅವರ ಸಾಧನೆ ಬಗ್ಗೆ ಮಾತಾಡಲಿ ಯಾರು ಬೇಡ ಅಂತಾರೆ? ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರು ಯಾಕೆ ಮಾತಾಡೋದು? ಬಿಜೆಪಿ ನಾಯಕರು ಯಾರ ಬಗ್ಗೆಯೂ ಟೀಕೆಗಳನ್ನು ಮಾಡಬಾರದೆಂದು ನಿರ್ಧರಿಸಿದ್ದಾರೆ. ಬಿಜೆಪಿ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಮಾಡಿದ ಸಾಧನೆಗಳೇ ಶ್ರೀರಕ್ಷೆ. ಆ ಸಾಧನೆಗಳ ಹಿನ್ನೆಲೆಯಲ್ಲೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸದಾನಂದ ಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯತೀಂದ್ರ ಸಿದ್ದರಾಮಯ್ಯ ಉತ್ತಮ ಆಯ್ಕೆ ಅನಿಸುತ್ತಾರೆ, ಆದರೆ ಯಾರೇ ಸ್ಪರ್ಧಿಸಿದರೂ ಗೆಲುವಿಗೆ ಶ್ರಮಿಸುತ್ತೇವೆ: ತನ್ವೀರ್ ಸೇಟ್, ಶಾಸಕ