ದರ್ಶನ್ ತೂಗುದೀಪ: ಬಳ್ಳಾರಿ ಜೈಲಿಗೆ ಬಂದ ನಟನನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು, ಟ್ರಾಫಿಕ್ ಜಾಮ್!

ದರ್ಶನ್ ತೂಗುದೀಪ: ಬಳ್ಳಾರಿ ಜೈಲಿಗೆ ಬಂದ ನಟನನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು, ಟ್ರಾಫಿಕ್ ಜಾಮ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2024 | 10:55 AM

Darshan Toogudeepa: ಕೊಲೆ ಅರೋಪ ಹೊತ್ತು ಜೈಲು ಸೇರಿದರೂ ನಟ ದರ್ಶನ್ ಜನಪ್ರಿಯತೆ ಕಡಿಮೆಯಾಗದಿರುವುದು ಅಚ್ಚರಿ ಮೂಡಿಸುತ್ತದೆ. ಬಳ್ಳಾರಿಯ ಯುವಕ ಯುವತಿಯರು ದರ್ಶನ್ ಹೊತ್ತ ವ್ಯಾನ್ ಕಂಡ ಕೂಡಲೇ ಹೋಯ್ ಎಂದು ಕಿರಚುತ್ತ ತಮ್ಮ ಸಂತಸ, ರೋಮಾಂಚನ ವ್ಯಕ್ತಪಡಿಸಿದರು.

ಬಳ್ಳಾರಿ: ಜನ ಮರುಳೋ ಜಾತ್ರೆ ಮರುಳೋ? ಇವತ್ತು ಬೆಳಗ್ಗೆ ಬೆಂಗಳೂರು ಪೊಲೀಸರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ತೂಗುದೀಪ ದರ್ಶನ್ ಅವರನ್ನು ಬಳ್ಳಾರಿಗೆ ಕರೆತಂದಾಗ ನಟನನ್ನು ನೋಡಲು ಬಳ್ಳಾರಿಯ ಜನ ರಸ್ತೆಗಳಲ್ಲಿ ನೆರೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ರಸ್ತೆಗಳಿಂದ ದೂರ ಸರಿಸಲು ಬಳ್ಳಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ ತೂಗುದೀಪ: ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ದಾಸನ ಎಂಟ್ರಿ ಹೇಗಿತ್ತು ನೋಡಿ