ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಬೆಡ್​ನಲ್ಲಿ ಎರಡೆರಡು ಮಕ್ಕಳಿಗೆ ಚಿಕಿತ್ಸೆ

Edited By:

Updated on: Jan 07, 2024 | 1:20 PM

ಕಲಬುರಗಿ ಜಿಮ್ಸ್ ಮಕ್ಕಳ ಚಿಕಿತ್ಸಾ ಘಟಕದಲ್ಲಿ ಒಂದೇ ಬೆಡ್ ಮೇಲೆ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೆಡ್ ಇಲ್ಲದ ಕಾರಣ ಒಂದೇ ಬೆಡ್ ಮೇಲೆ ಎರಡೆರಡು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿ (Kalaburagi) ಜಿಮ್ಸ್ (Gims) ಮಕ್ಕಳ ಚಿಕಿತ್ಸಾ ಘಟಕದಲ್ಲಿ ಒಂದೇ ಬೆಡ್ ಮೇಲೆ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೆಡ್ ಇಲ್ಲದ ಕಾರಣ ಒಂದೇ ಬೆಡ್ ಮೇಲೆ ಎರಡೆರಡು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಒಂದು ಮಗುವಿನ ರೋಗ ಇನ್ನೊಂದು ಮಗುವಿಗೆ ಹರಡುವ ಸಾಧ್ಯತೆ ಇದೆ. ಇನ್ನು ಮಕ್ಕಳ ಘಟಕದಲ್ಲಿ ತಾತ್ಕಾಲಿಕ ಬೆಡ್ ವ್ಯವಸ್ಥೆಯಿದೆ. ಆದರೂ ಕೂಡ ಒಂದೇ ಬೆಡ್​ನಲ್ಲಿ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಮಕ್ಕಳ ಚಿಕಿತ್ಸಾ ಘಟಕ ಕುರಿದೊಡ್ಡಿಯಂತಾಗಿದೆ.