ಸದಾ ಕ್ರಿಯಾಶೀಲವಾಗಿರುವ ಮನಸ್ಸಿನಲ್ಲಿ ಅನುಮಾನಗಳು ಹುಟ್ಟಿಕೊಳ್ಳುವುದಿಲ್ಲ: ಡಾ ಸೌಜನ್ಯ ವಶಿಷ್ಠ
ಸಂಗಾತಿ ಮೊಬೈಲ್ ನಲ್ಲಿ ಮಾತಾಡುವುದನ್ನು ಕದ್ದು ಕೇಳುವುದು ಮತ್ತು ಮೆಸೇಜು ಮತ್ತು ವಾಟ್ಸ್ಯಾಪ್ ಗಳನ್ನು ನೋಡುವುದು ಖಂಡಿತ ತಪ್ಪು. ನಿಮ್ಮಲ್ಲಿ ಅನುಮಾನ ಮನೆ ಮಾಡಿದೆ ಮತ್ತು ಒಂದು ಬಗೆಯ ಅಭದ್ರತೆ ನಿಮ್ಮನ್ನು ಕಾಡುತ್ತಿದೆ ಅನ್ನೋದನ್ನು ಅದು ತೋರಿಸುತ್ತದೆ.
ತೆಲುಗಿನಲ್ಲಿ ಒಂದು ಗಾದೆಮಾತಿದೆ ಅನುಮಾನಂ ಪೆದ್ದರೋಗಂ ಅಂತ. ಅಂದರೆ ನಮ್ಮ ಮನಸ್ಸಿನಲ್ಲಿ ಅನುಮಾನ ತುಂಬಿಕೊಂಡಿದ್ದರೆ ಅದನ್ನು ಹೋಗಲಾಡಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ (Dr Soujnaya Vasistha) ಅವರು ಸಂಬಂಧಗಳ (relationship) ವಿಷಯದಲ್ಲಿ, ಪತಿ ಪತ್ನಿಯರ ನಡುವೆ, ಸಂಗಾತಿಗಳ (partners) ನಡುವೆ ನಂಬಿಕೆ ಇರಬೇಕಿರುವುದು ಬಹಳ ಮುಖ್ಯ ಅಂತ ಹೇಳುತ್ತಾರೆ. ಸಂಬಂಧವೊಂದು ಅನುಮಾನದ ತಳಹದಿಯ ಮೇಲೆ ನಿಂತಿದ್ದರೆ ಅದು ಬೇಗ ಕುಸಿದು ಬಿಡುತ್ತದೆ. ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಇಟ್ಟುಕೊಳ್ಳುವ ಮೊದಲು ಅವರ ಬಗ್ಗೆ ನಂಬಿಕೆ ಬೆಳಸಿಕೊಳ್ಳಿ ಅಂತ ಆವರು ಹೇಳುತ್ತಾರೆ. ನಮ್ಮ ಸಂಗಾತಿಯ ಬಗ್ಗೆ ಅತಿ ಅನಿಸುವಷ್ಟು ಪೊಸೆಸ್ಸಿವ್ ಆಗಿದ್ದರೆ ಅದು ಅಪನಂಬಿಕೆ ಹುಟ್ಟಲು ಕಾರಣವಾಗುತ್ತದೆ. ಹಾಗೇಯೇ ನಮ್ಮಲ್ಲಿ ಕೀಳರಿಮೆ ಇದ್ದರೆ ಇಲ್ಲವೇ ಅಭದ್ರತೆಯ ಭಾವ ನಮ್ಮನ್ನು ಕಾಡುತ್ತಿದ್ದರೂ ಅದು ಸಂಗಾತಿಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡುತ್ತದೆ ಎಂದು ಸೌಜನ್ಯ ಹೇಳುತ್ತಾರೆ.
ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು, ಎಂಬ ಹಳೆಯ ಕನ್ನಡ ಸಿನಿಮಾ ಹಾಡನ್ನು ಡಾ ಸೌಜನ್ಯ ನೆನಪಿಸಿಕೊಳ್ಳುತ್ತಾರೆ. ಸಂಗಾತಿಯ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ಅನುಮಾನಪಡೋದು ಮತ್ತು ಅವರು ತಮ್ಮ ಕೊಲೀಗ್ ಜೊತೆ ಇಲ್ಲ ಸಂಬಂದಿಕರ ಜೊತೆ ಕೊಂಚ ಸಲುಗೆಯಿಂದ ಮಾತಾಡುತ್ತಿರುವುದನ್ನು ನೋಡಿ ಒಂದು ಅಭಿಪ್ರಾಯ ತಳೆದುಬಿಡುವುದು ಸರಿಯಲ್ಲ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಅಂತ ಹಿರಿಯರು ಅಕ್ಷರಶಃ ಸತ್ಯ ಎಂದು ಸೌಜನ್ಯ ಹೇಳುತ್ತಾರೆ.
ಸಂಗಾತಿ ಮೊಬೈಲ್ ನಲ್ಲಿ ಮಾತಾಡುವುದನ್ನು ಕದ್ದು ಕೇಳುವುದು ಮತ್ತು ಮೆಸೇಜು ಮತ್ತು ವಾಟ್ಸ್ಯಾಪ್ ಗಳನ್ನು ನೋಡುವುದು ಖಂಡಿತ ತಪ್ಪು. ನಿಮ್ಮಲ್ಲಿ ಅನುಮಾನ ಮನೆ ಮಾಡಿದೆ ಮತ್ತು ಒಂದು ಬಗೆಯ ಅಭದ್ರತೆ ನಿಮ್ಮನ್ನು ಕಾಡುತ್ತಿದೆ ಅನ್ನೋದನ್ನು ಅದು ತೋರಿಸುತ್ತದೆ. ಮನಸನ್ನು ಯಾವತ್ತೂ ಬ್ಯೂಸಿಯಾಗಿಡಿ ಅದನ್ನು ಕಂಟ್ರೋಲ್ ಮಾಡುವುದನ್ನು ಕಲಿಯಿರಿ ಅಂತ ಡಾ ಸೌಜನ್ಯ ಹೇಳುತ್ತಾರೆ.
ಮನಸನ್ನು ಬ್ಯೂಸಿಯಾಗಿಡಬೇಕಾದರೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು-ಪುಸ್ತಕ ಓದುವುದು, ಕ್ರೀಡೆ, ವ್ಯಾಯಾಮ, ಮನೆಗೆಲಸಗಳನ್ನು ಮಾಡುವುದು ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿದ್ದರೆ, ಮನಸ್ಸು ಮತ್ತು ದೇಹದ ಆರೋಗ್ಯವಾಗಿರುತ್ತದೆ, ಅಲ್ಲಿ ವೃಥಾ ಅನುಮಾನಗಳಿಗೆ ಅವಕಾಶವಿರುವುದಿಲ್ಲ ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ,
ಇದನ್ನೂ ಓದಿ: Viral: ಪ್ರೇಮಿಗಳ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್; ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್