ಶಾಲಾ ಆಟದ ಮೈದಾನದ ಕಂಪೌಂಡ್​ಗಾಗಿ ಸಿಎಂ, ಪ್ರಧಾನಿ ಮೋದಿಗೆ ಪತ್ರ ಬರೆದ ಸರ್ಕಾರಿ ಶಾಲೆ ವಿದ್ಯಾರ್ಥಿನಿ!

Edited By:

Updated on: Aug 04, 2025 | 9:28 AM

ಶಾಲೆಯ ಆಟದ ಮೈದಾನಕ್ಕೆ ಕಂಪೌಂಡ್ ಇಲ್ಲದ ಕಾರಣ ಆಗುತ್ತಿರುವ ಸಮಸ್ಯೆಗಳ ಬಗ್ಗೆ 2024ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದ ತುಮಕೂರು ತಾಲೂಕಿನ ಬೆಳೆದರ ಗ್ರಾಮದ ಪುಟಾಣಿ ವಿದ್ಯಾರ್ಥಿನಿ, ಅದರಿಂದ ಪ್ರಯೋಜನವಾಗದ ಹಿನ್ನೆಲೆ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದಾರಮಯ್ಯಗೆ ಪತ್ರ ಬರೆದಿದ್ದಾಳೆ.

ತುಮಕೂರು, ಆಗಸ್ಟ್ 4: ಶಾಲಾ ಆಟದ ಮೈದಾನದ ಕಾಂಪೌಂಡ್​ಗಾಗಿ ಸರ್ಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ! ತುಮಕೂರು ತಾಲೂಕಿನ ಬೆಳೆದರ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಸಿಮ್ರಾ ಸನೋಬರ್​​​ ಪತ್ರ ಬರೆದಿದ್ದು, ಮೈದಾನಕ್ಕೆ ಕಾಂಪೌಂಡ್​ ನಿರ್ಮಾಣ ಆಗುವ ವರೆಗೆ ಶಾಲೆಗೆ ಬರಲ್ಲ ಎಂದಿದ್ದಾಳೆ. 2024ರಲ್ಲಿ ಬಿಇಒಗೆ ಪತ್ರ ಬರೆದು ಮನವಿ ಮಾಡಿದ್ದಳು. ಅಂದು ವಿದ್ಯಾರ್ಥಿನಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆಶ್ವಾಸನೆ ನೀಡಿದ್ದರು. ಆದರೆ, ಒಂದು ವರ್ಷ ಕಳೆದರೂ ಕಾಂಪೌಂಡ್ ನಿರ್ಮಾಣ ಮಾಡದ ಹಿನ್ನೆಲೆ ಇದೀಗ ಪ್ರಧಾನಿ, ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಳೆ. ಶಾಲೆಯ ಆಟದ ಮೈದಾನದಲ್ಲಿ ಖಾಸಗಿ ಕಾರು, ಬಸ್​ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ಆಟವಾಡಲು ಭಯವಾಗುತ್ತಿದೆ ಎಂದು ಸಿಮ್ರಾ ಹೇಳಿದ್ದು, ಆಕೆಯ ಹೋರಾಟಕ್ಕೆ ತಂದೆ ರಫೀಕ್​ ಸಾಥ್ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ