AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!

ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!

ಜಗದೀಶ ಬಿ.
| Edited By: |

Updated on:Oct 12, 2026 | 6:35 AM

Share

ತುಮಕೂರು ದಸರಾ 2026 ಮಹೋತ್ಸವಕ್ಕೆ ಶೈಲಪುತ್ರಿ ಅಲಂಕಾರದೊಂದಿಗೆ ಅದ್ದೂರಿ ಚಾಲನೆ ನೀಡಲಾಗಿದೆ. 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗೋಲ್ಡನ್‌ ಟೆಂಪಲ್ ಮಾದರಿಯ ಧಾರ್ಮಿಕ ಮಂಟಪ ಜನರ ಗಮನ ಸೆಳೆದಿದೆ. ಡಿಸಿಎಂ ಜಿ. ಪರಮೇಶ್ವರ್ ಹೋಮ-ಹವನಗಳಲ್ಲಿ ಭಾಗವಹಿಸಿ, ಫಲಪುಷ್ಪ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ತುಮಕೂರು, ಅಕ್ಟೋಬರ್ 12: ತುಮಕೂರು ದಸರಾ ಮಹೋತ್ಸವ 2026ಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮೊದಲ ದಿನ ನವದುರ್ಗೆಯ ಮೊದಲ ರೂಪವಾದ ಶೈಲಪುತ್ರಿ ಅಲಂಕಾರದಲ್ಲಿ ದುರ್ಗಾದೇವಿ ಭಕ್ತರ ಗಮನ ಸೆಳೆದರು. ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಬೆಳ್ಳಾವಿಯ ಕಾರದ ಮಠದ ಸ್ವಾಮೀಜಿ, ಎಲೆರಾಮಪುರದ ಸ್ವಾಮೀಜಿ ಹಾಗೂ ಸಿದ್ದರಬೆಟ್ಟದ ಸ್ವಾಮೀಜಿಗಳು ಸೇರಿ ದಸರಾ ಉದ್ಘಾಟಿಸಿದರು. ಧ್ವಜಾರೋಹಣದ ಮೂಲಕ 11 ದಿನಗಳ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ, 6 ಲಕ್ಷ ರೂಪಾಯಿ ವೆಚ್ಚದಲ್ಲಿ, 60*80 ಅಡಿ ವಿಸ್ತೀರ್ಣದಲ್ಲಿ ಗೋಲ್ಡನ್‌ ಟೆಂಪಲ್ ಮಾದರಿಯ ಮಂಟಪ ನಿರ್ಮಿಸಲಾಗಿದೆ. ಇದು ಉತ್ತರ ಮತ್ತು ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪವನ್ನು ಒಳಗೊಂಡಿದ್ದು, ಕೇವಲ 9 ದಿನಗಳಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಇದನ್ನು ನಿರ್ಮಿಸಿದ್ದಾರೆ. ದುರ್ಗೆಯ ಎಡ-ಬಲದಲ್ಲಿ ಜಯ-ವಿಜಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಒಳಾಂಗಣದಲ್ಲಿ ಗಣೇಶ ಸೇರಿದಂತೆ ಹಲವು ದೇವರ ಮೂರ್ತಿಗಳನ್ನು ಅನಾವರಣಗೊಳಿಸಲಾಗಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪತ್ನಿ ಕನಿಕಾ ಅವರೊಂದಿಗೆ ಹೋಮ ಹವನಗಳಲ್ಲಿ ಭಾಗವಹಿಸಿದರು. ವಸ್ತು ಪ್ರದರ್ಶನಾಲಯ ಮತ್ತು ಫಲಪುಷ್ಪ ಪ್ರದರ್ಶನಕ್ಕೂ ಚಾಲನೆ ದೊರೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 12, 2026 06:31 AM

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More